ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಗಣಪತಿ ವಿಸರ್ಜನೆ ಮಾಡಲು ಕೊವಿಡ್ ನಿಯಾಮವಳಿ ಮುಂದಿಟ್ಟುಕೊಂಡು ಗಣಪತಿ ಭಕ್ತ ಮಂಡಳಿಯವರು ಪ್ರತಿಷ್ಟಾಪಿಸಲಾದ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಜಿಲ್ಲಾಡಳಿತ ಅನುಮತಿ ನೀಡಲಿಲ್ಲ.
ಇದರಿಂದಾಗಿ ಮತ್ತಷ್ಟು ದಿನಗಳ ಕಾಲ ಪೂಜ ಕೈಂಕರ್ಯಗಳು ಮುಂದುವರೆಯುವಂತಾಗಿದೆ.
ಈಗ ಜಿಲ್ಲಾಡಳಿತ ದಸರಾ ಕಾರ್ಯಕ್ರಮಗಳು ನಡೆಸುತ್ತಿದೆ. ಇವರಿಗೆ ಕೊವಿಡ್ ನಿಯಮಗಳು ಅನ್ವಯ ಆಗೊಲ್ವಾ.. ಸಾಮಾಜಿಕ ಅಂತರವೂ ಇಲ್ಲ, ಕಡ್ಡಾಯ ಮಾಸ್ಕ್ ಇಲ್ಲ, ಸ್ಯಾನಿಟೈರಸ್ಡ್ ಮೊದಲೆ ಇಲ್ಲ.
ಹೀಗಿರುವಾಗ ಗಣಪತಿ ಮೆರವಣಿಗೆಗೆ ನೂರೆಂಟು ತಕರಾರು ಜಿಲ್ಲಾಡಳಿತ ಯಾಕೆ ವಿಧಿಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಒಂದೆಡೆ ದಸರಾ ಕಾರ್ಯಕ್ರಮ ಪೆÇಸ್ಟರ್ ಮತ್ತೊಂದೆಡೆ ಗಣಪತಿ ಚಿತ್ರ ಹಾಕಿ ಎಲ್ಲೂ ಇಲ್ಲದ ಕಾನೂನು ನಮ್ಮ ಚಾಮರಾಜನಗರದಲ್ಲಿ ಅನ್ನೊ ಸ್ಲೋಗನ್ ವೈರಲ್ ಆಗುತ್ತಿದೆ.
ದಸರಾ ಕಾರ್ಯಕ್ರಮಕ್ಕೆ ಡಿಜೆ ಸೌಂಡ್ ಹಾಕುವುದು, ಸರ್ವರಿಗೂ ಸುಸ್ವಾಗತ, ಎಲ್ಲರೂ ಬರಬಹುದು, ಸ್ಟೇಜ್ ಹಾಕಿ ಕಾರ್ಯಕ್ರಮ ಮಾಡಬಹುದು. ಆದರೆ ಇದೆ ಗಣಪತಿ ಕಾರ್ಯಕ್ರಮದಲ್ಲಿ ಡಿಜೆ ಸೌಂಡ್ ಹಾಕೊಗಿಲ್ಲ, ವೇದಿಕೆ ಹಾಕೋಗಿಲ್ಲ, ಕಾರ್ಯಕ್ರಮ ಮಾಡೋಗಿಲ್ಲ, ಹೆಚ್ಚು ಜನ ಸೇರುವಂತಿಲ್ಲ ಎಂಬಿತ್ಯಾದಿ ನಿಯಮ ಹೇರಿದ ಜಿಲ್ಲಾಡಳಿತ ವಿರುದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ.. ಸರಿಯೆ ಎಂದು ಪ್ರಶ್ನಿಸತೊಡಗಿದ್ದಾರೆ.
ಸರ್ಕಾರದ ಕಾರ್ಯಕ್ರಮ ದಸರಾಕ್ಕೆ ಹಣ ಬಿಡುಗಡೆ ಮಾಡಿ ಅದೆಷ್ಟೊ ಲೆಕ್ಕ ತೋರಿಸಿ ಬಾಕಿ ಗುಡಾಸಿ ಗುಂಡಾಂತರ ಮಾಡೋ ಇಂತಹದ್ದಕ್ಕೆ ಕೊರೊನೊ ಬರೊಲ್ಲ…ಪವಿತ್ರವಾದ ಗಣೇಶ ಹಬ್ಬಕ್ಕೆ ಕೊರೊನೊ ಬರುವುದೆ ಎಂದು ಗಣಪತಿ ಭಕ್ತ ಮಂಡಳಿಯವರು ಹಾಗೂ ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.