ಮೈಸೂರು: ಪೆÇಲೀಸರು ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ್ದರಿಂದ ಪೆÇಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಹಾರಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ನಂಜನಗೂಡು ತಾಲೂಕು ಹದಿನಾರು ಗ್ರಾಮದಲ್ಲಿ ನಡೆದಿದೆ.
ನಂಜುಂಡ (37) ಮೃತ ವ್ಯಕ್ತಿ.
ಭಾನುವಾರ ಸಂಜೆ ಐದಾರೂ ಮಂದಿ ಜೂಜಾಡುತ್ತಿದ್ದರು. ಈ ವೇಳೆ ಪೆÇಲೀಸರು ದಾಳಿ ನಡೆಸಿದ್ದರು. ಆಗ ಪೆÇಲೀಸರಿಂದ ತಪ್ಪಿಸಿಕೊಳ್ಳಲು ನಂಜುಂಡ ಕೆರೆಗೆ ಹಾರಿದ್ದು, ಆತ ಸಾವನ್ನಪ್ಪಿದ್ದಾನೆ.
ಕೆರೆಗೆ ಹಾರಿದ್ದ ನಂಜುಂಡನಿಗೆ ಈಜು ಬರುತ್ತಿರಲಿಲ್ಲ. ಹೀಗಾಗಿ ನೀರಲ್ಲಿ ಮುಳುಗಿ ಅಸುನೀಗಿದ್ದಾನೆ.
ನಂಜನಗೂಡು ಗ್ರಾಮಾಂತರ ಪೆÇಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿ ಮೃತ ನಂಜುಂಡನ ದೇಹವನ್ನು ಹೊರ ತೆಗೆದಿದ್ದಾರೆ.
ನಂಜನಗೂಡು ಗ್ರಾಮಾಂತರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.