ಚಾಮರಾಜನಗರ: ವಿವಾಹ ಪೂರ್ವದಲ್ಲಿ ಪರಸ್ಪರ ಸಮ್ಮತಿಯ ಮೇರೆಗೆ ನಡೆಸುವ ಲೈಂಗಿಕ ಸಂಬಂಧ ಅತ್ಯಾಚಾರವಲ್ಲ ಎಂದು ಚಾಮರಾಜನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಮಲೆ ಮಹದೇಶ್ವರ ಬೆಟ್ಟ ಪೆÇಲೀಸ್ ಠಾಣೆಯಲ್ಲಿ ಕಾನ್‍ಸ್ಟೇಬಲ್ ಆಗಿದ್ದ ನಂದಕುಮಾರ್ ವಿರುದ್ಧ ಅದೇ ಠಾಣೆಯ ಮಹಿಳಾ ಕಾನ್‍ಸ್ಟೇಬಲ್ ಒಬ್ಬರು ತನ್ನನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಬಂಧ ಬೆಳೆಸಿ ವಂಚನೆ ಮಾಡಿದ್ದಾರೆ ಎಂದು 2018ರ ಜೂನ್ 6ರಂದು ಮಲೆಮಹದೇಶ್ವರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸದಾಶಿವ ಎಸ್. ಸುಲ್ತಾನಪುರಿ ಅವರು, ಮದುವೆಯಾಗುವ ಭರವಸೆ ನೀಡಿ ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ ಪಡೆದಿದ್ದ ಆರೋಪಿಯು ಆ ವೇಳೆ ಅಪರಾಧಿಕ ಮನಸ್ಥಿತಿ ಹೊಂದಿರಲಿಲ್ಲ. ಅಪರಾಧ ಎಸಗುವ ಉದ್ದೇಶದಿಂದಲೇ ಲೈಂಗಿಕ ಸಂಬಂಧ ಬೆಳೆಸಿಲ್ಲ. ಆರೋಪಿ ಹಾಗೂ ಸಂತ್ರಸ್ತಳ ವೈವಾಹಿಕ ಪೂರ್ವ ಸಂಬಂಧದ ಸಾಂಪ್ರದಾಯಿಕ ಆಚರಣೆಗಳಲ್ಲಿ ತೊಡಕು ಉಂಟಾಗಿ ಮದುವೆಯಾಗಲು ಅಡ್ಡಿಯಾದರೆ ಅದು ಅಪರಾಧಿಕ ಮನಸ್ಥಿತಿಯಲ್ಲ. ಹೀಗಾಗಿ ಆರೋಪಿ ವರ್ತನೆ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಆದೇಶ ನೀಡಿ ಪ್ರಕರಣವನ್ನು ವಜಾಗೊಳಿಸಿದ್ದಾರೆ.
ಸಂತ್ರಸ್ತೆಯಿಂದ ಸುಳ್ಳು ಪ್ರಕರಣ ದಾಖಲು!
ಆರೋಪಿ ಪರ ವಕೀಲರು ದೋಷರೋಪ ಪಟ್ಟಿ ರಚಿಸಲು ಇದು ಸೂಕ್ತ ಪ್ರಕರಣವಲ್ಲ. ಆರೋಪಿಯು ಸಂತ್ರಸ್ತೆಗಿಂತ 10 ವರ್ಷ ಚಿಕ್ಕವನಾಗಿದ್ದು, ಸ್ನೇಹಿತರಾಗಿದ್ದರು.
ಆರೋಪಿ ಬೇರೆ ಮದುವೆಯಾದ ಕಾರಣ ಸಂತ್ರಸ್ತೆಯು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಅಂತಿಮ ವರದಿಯ ಜತೆ ಸಲ್ಲಿಸಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂಬ ಆರೋಪಿ ಪರ ವಕೀಲರು ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಆರೋಪಿಗಳಾದ ನಂದಕುಮಾರ್, ಶ್ರೀನಿವಾಸ, ನಾಗೇಶ್, ಸೆಲ್ವಿ ಅವರನ್ನು ದೋಷಮುಕ್ತರೆಂದು ಘೋಷಿಸಿ ಖುಲಾಸೆಗೊಳಿಸಿದೆ.
ಆರೋಪಿಯಾಗಿದ್ದ ಕಾನ್‍ಸ್ಟೇಬಲ್ ನಂದಕುಮಾರ್ ಅವರು ಸದ್ಯ ಚಾಮರಾಜನಗರ ಪೂರ್ವ ಪೆÇಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆರೋಪಿಗಳ ಪರ ಬಿ. ಪ್ರಸನ್ನಕುಮಾರ್ ವಕಾಲತ್ತು ವಹಿಸಿ ವಾದ ಮಂಡಿಸಿದ್ದರು.