ಮೈಸೂರಲ್ಲಿ ಯುವಕನ ಕೊಲೆ ಪ್ರಕರಣ: 24 ಗಂಟೆಯಲ್ಲಿ ನಾಲ್ವರ ಬಂಧನ

ಮೈಸೂರು: ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ನಡೆದಿದ್ದು ಘಟನೆಯಲ್ಲಿ ಓರ್ವ ಯುವಕನಿಗೆ ಚಾಕುವನ್ನು ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಗುಂಡೂರಾವ್ ನಗರದಲ್ಲಿ ನಿನ್ನೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ 24 ಗಂಟೆಯೊಳಗೆ 4 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ.

ಭೈರವೇಶ್ವರ ನಗರದ ನಂದಕಿಶೋರ್ (24) ಹತ್ಯೆಯಾಗಿದ್ದ.

ಮೃತ ನಂದ ಕಿಶೋರ್ ಸ್ನೇಹಿತ ಸಂಜಯ್ (25) ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪ್ರಕರಣದ ಹಿನ್ನೆಲೆ
ಮೈಸೂರಿನ ಗುಂಡೂರಾವ್ ನಗರ ಹಾಗೂ ಕನಕಗಿರಿ ನಡುವೆ ಗಿಡಗಂಟಿಗಳು ಬೆಳೆದಿರುವ ಖಾಲಿ ಜಾಗದಲ್ಲಿ ಭಾನುವಾರ ಸಂಜೆ ಏಳೆಂಟು ಮಂದಿ ಗುಂಪಾಗಿ ಕುಳಿತಿದ್ದರು.

ಈ ವೇಳೆ ಸಂಜಯ್ ಹಾಗೂ ಇಬ್ಬರು ಶ್ವಾನವನ್ನು ಹಿಡಿದುಕೊಂಡು ಅಲ್ಲಿಯೇ ವಾಕ್ ಮಾಡುತ್ತಿದ್ದರು. ಈ ವೇಳೆ ಗುಂಪಿನಲ್ಲಿದ್ದವನೋರ್ವ ಸಂಜಯ್ ನನ್ನು ನೋಡಿ ಏನೋ ಗುರಾಯಿಸ್ತೀಯಾ ಎಂದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಓರ್ವ ಸಂಜಯ್ ಗೆ ಕೈನಿಂದ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಸಂಜಯ್ ತನ್ನ ಸ್ನೇಹಿತ ನಂದಕಿಶೋರ್ ಗೆ ಕರೆ ಮಾಡಿ ವಿಷಯ ತಿಳಿಸಿ ಸ್ಥಳಕ್ಕೆ ಬರುವಂತೆ ತಿಳಿಸಿದ್ದು, ಸ್ಥಳಕ್ಕೆ ಬಂದ ನಂದಕಿಶೋರ್ ತನ್ನ ಸ್ನೇಹಿತನಿಗೆ ಹೊಡೆದಿದ್ದನ್ನು ಪ್ರಶ್ನಿಸಿದ್ದು ಮಾತಿಗೆ ಮಾತು ಬೆಳೆದು ಮಾರಾಮಾರಿಯಾಗಿದೆ. ಏತನ್ಮಧ್ಯೆ ಓರ್ವ ಚಾಕು ಹಿಡಿದುಕೊಂಡು ಸಂಜಯ್ ಗೆ ಚುಚ್ಚಲು ಯತ್ನಿಸಿದ್ದಾನೆ. ಆಗ ಸಂಜಯ್ ತಪ್ಪಿಸಿಕೊಂಡಿದ್ದು ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾನೆ. ನಂದಕಿಶೋರ್ ಮಧ್ಯಪ್ರವೇಶಿಸಿ ಗುಂಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದರಿಂದ ಓರ್ವ ಚಾಕುವಿನಿಂದ ಐದಾರು ಬಾರಿ ನಂದಕಿಶೋರ್ ಗೆ ತಿವಿದಿದ್ದಾನೆ. ತೀವ್ರರಕ್ತಸ್ರಾವವಾಗಿ ನಂದಕಿಶೋರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನೆ ದಿನ ಸ್ಥಳಕ್ಕೆ ಎಸಿಪಿ ಪೂರ್ಣಚಂದ್ರ ತೇಜಸ್ವಿ, ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ರೂಪಿಸಿದ್ದರು.

ನಂಜನಗೂಡು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರಣ್ಯಪುರಂ ಠಾಣಾ ಇನ್ಸಪೆಕ್ಟರ್ ರಾಜು ನೇತೃತ್ವದಲ್ಲಿ ಸಬ್ ಇನ್ಸಪೆಕ್ಟರ್ ರಂಗಸ್ವಾಮಿ, ಸಿಬ್ಬಂದಿಗಳಾದ ನಟರಾಜ, ರಮೇಶ್, ಮಂಜುನಾಥ್, ರಾಜೇಶ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿದ್ಯಾರಣ್ಯಪುರಂ ಪೆÇಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.