ರಾಷ್ಟ್ರಪತಿ ಕಾರ್ಯಕ್ರಮದಲ್ಲೆ ಆಯ್ತೆ ಭದ್ರತಾ ವೈಪಲ್ಯ; ಪೆÇಲೀಸ್ ವಾಕಿಟಾಕಿ ಮತ್ತ್ಯಾರದ್ದೋ ಕೈಯಲ್ಲಿ!

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ಇತ್ತೀಚೆಗೆ ಚಾಮರಾಜನಗರಕ್ಕೆ ರಾಷ್ಟ್ರಪತಿಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆಲವು ಭದ್ರತಾ ಲೋಪಗಳು ಬೆಳಕಿಗೆ ಬಂದಿವೆ.

ಭದ್ರತೆಗಾಗಿ ನಿಯೋಜಿಸಿದ್ದ ಪೆÇಲೀಸರೆ ಕರ್ತವ್ಯ ಲೋಪ ಎಸಗಿರುವ ಬಗ್ಗೆ ಆರೋಪ, ಪ್ರತ್ಯಾರೋಪಗಳು ಇದೀಗ ಕೇಳಿ ಬರುತ್ತಿದೆ.

ರಾಷ್ಟ್ರಪತಿ ಕಾರ್ಯಕ್ರಮದ ಸಮಾರಂಭಕ್ಕೆ ಹಾಗೂ ಹೆಲಿಪ್ಯಾಡ್ ಸ್ಥಳಕ್ಕೆ ಪಾಸ್ ಇಲ್ಲದೆ ಬೇರೆ ಯಾರಿಗೂ ಪ್ರವೇಶ ಅವಕಾಶ ಇರಲಿಲ್ಲ. ಅಷ್ಟೆ ಅಲ್ಲ ಸರ್ಪಗಾವಲು ಪೆÇಲೀಸ್ ಹಾಕಿರೋದು ಎಲ್ಲರಿಗೂ ತಿಳಿದ ವಿಚಾರವೆ ಸರಿ..

ಆದರೂ ಈ ನಡುವೆ ಪೆÇೀಲೀಸ್ ಇಲಾಖೆ ವಾಕಿ ಟಾಕಿ (ವೈರ್ ಲೆಸ್) ಖಾಸಗಿ ವ್ಯಕ್ತಿಯೊಬ್ಬರ ಕೈಗೆ ನೀಡಿ ಭದ್ರತೆಗೆ ನಿಯೋಜಿಸಿದ್ದು ಬೆಳಕಿಗೆ ಬಂದಿದ್ದು ಭದ್ರತಾ ವೈಫಲ್ಯ ಕ್ಕೆ ಸಾಕ್ಷಿಯಾಗಿದೆ.

ಈ ಖಾಸಗಿ ವ್ಯಕ್ತಿ ನಂಬಿಕೆಗೆ ಅರ್ಹ ಎಂದಿಟ್ಟುಕೊಂಡರೂ ಸಹ ಪೆÇಲೀಸರು ಬಳಸುವ ವಾಕಿಟಾಕಿಯನ್ನು ಇವರ ಕೈಗೆ ನೀಡಿದ್ದು ಯಾರು, ಹೀಗೆ ಪೆÇೀಲೀಸರಲ್ಲದ ಇತರ ವ್ಯಕ್ತಿಗಳಿಗೆ ವಾಕಿಟಾಕಿ ನೀಡಬಹುದೇ ಎಂಬ ಪ್ರಶ್ನೆ ಇದೀಗ ಎದ್ದಿದೆ.

ಖಾಸಗಿ ವ್ಯಕ್ತಿ ಕೈಗೆ ವಾಕಿಟಾಕಿ ನೀಡಲು ಅನುಮತಿ ನೀಡಲಾಗಿತ್ತೆ? ವಾಕಿಟಾಕಿ ನೀಡಿದ ಅಧಿಕಾರಿಯಾದರೂ ಯಾರು? ಪೆÇೀಲೀಸ್ ಇಲಾಖೆಗೆ ಸಂಬಂಧಪಡದ ವ್ಯಕ್ತಿ ಪೆÇೀಲೀಸ್ ಇಲಾಖೆಯ ವಾಕಿಟಾಕಿ ಬಳಸಬಹುದೇ? ಇದಕ್ಕೆ ಪೆÇೀಲೀಸ್ ಇಲಾಖೆ ಉತ್ತರಿಸಬೇಕಾದರೂ ಮೌನ ವಹಿಸಿದೆ ಎಂದರೆ ಇಲಾಖೆಯೆ ವೈಫಲ್ಯ ತಡೆಯುವಲ್ಲಿ ವಿಫಲವಾಗಿದೆ ಎನ್ನಬಹುದು.

ವಿವಿಧ ಕ್ಷೇತ್ರಗಳ ಗಣ್ಯರಿಗೆ, ಜನಪ್ರತಿನಿಧಿಗಳಿಗೆ ಪೆÇಲೀಸ್ ಇಲಾಖೆ ಪಾಸ್ ವಿತರಿಸಿರುವುದನ್ನು ಒಪ್ಪಿಕೊಳ್ಳಬಹುದಾದರೂ, ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಪಾಸ್‍ಗಳನ್ನು ಯಾವ ಮಾನದಂಡ ಅನುಸರಿಸಿ ನೀಡಲಾಗಿತ್ತು? ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದೇ ಕರೆಯಲ್ಪಡುವ ಮಾಧ್ಯಮಗಳ ಪ್ರತಿನಿಧಿಗಳ (ಮಾನ್ಯತೆ ಪತ್ರ ಹೊಂದಿದವರನ್ನು ಹೊರತುಪಡಿಸಿ)ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿತ್ತು.

ಹಾಗಿದ್ದ ಮೇಲೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರಿಗೆ ಯಾವ ಅರ್ಹತೆ ಪರಿಗಣಿಸಿ ಪಾಸ್ ನೀಡಲಾಗಿತ್ತು. ಮಾನ್ಯತೆ ಪತ್ರ ವಂಚಿತ ಪತ್ರಕರ್ತರಿಗೂ ಸಾರ್ವಜನಿಕರಿಗೆ ನೀಡಿದಂತೆ ಪಾಸ್ ನೀಡಬಹುದಿತ್ತಲ್ಲವೇ? ಎಂಬ ಪ್ರಶ್ನೆ ಉದ್ಭವಿಸಿದ್ದು ಅಂದಿನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೆಲವರುಯಾರದೊ ಪಾಸ್ ಅನ್ನು ಮತ್ತ್ಯಾರೊ ಪಡೆದು ಮುಖ್ಯ ದ್ವಾರದ ಮೂಲಕವೇ ಪ್ರವೇಶ ಪಡೆದಿದ್ದಾರೆ.

ಇತ್ತ ತಪಾಸಣೆ ಮಾಡಬೇಕಾದ ಪೆÇಲೀಸರು ಮೌನವಹಿಸಿದ್ದೇಕೆ ಎಂಬುದು ನಿಗೂಢವಾಗಿದೆ.

ಅಷ್ಟೆ ಅಲ್ಲ ಮುಖ್ಯ ದ್ವಾರದಲ್ಲೆ ರಾಜಕೀಯ ಪಕ್ಷದವರು ಗಲಾಟೆ ಮಾಡಿಕೊಂಡಿದ್ದು ಸಾಕ್ಷಿಯಾಗಿದೆ.

ರಾಷ್ಟ್ರಪತಿ ಹಾಗು ಮುಖ್ಯಮಂತ್ರಿಗಳು ಭಾಗವಹಿಸಿದ್ದ ಕಾರ್ಯಕ್ರಮ ಯಾವುದೇ ರೀತಿಯ ಲೋಪವಾಗದಂತೆ, ಯಾವ ಗಲಾಟೆಗೂ ಆಸ್ಪದ ನೀಡದಂತೆ ನಡೆಯಬೇಕು. ಆದರೆ ಅಂದು ನಡೆದಿದ್ದೇನು? ಈ ಎಲ್ಲಾ ಪ್ರಶ್ನೆಗಳಿಗೆ ಪೆÇೀಲೀಸ್ ಇಲಾಖೆ ಉತ್ತರಿಸಬೇಕಿದೆ.

ವಾಕಿ ಟಾಕಿ ಹಿಡಿದ ಖಾಸಗಿ ವ್ಯಕ್ತಿ ಯಾರು? ಪೆÇಲೀಸ್ ಇಲಾಖೆಗೆ ಸೇರಿದ ವಾಕಿ ಟಾಕಿ ಹಿಡಿದು ಪೆÇೀಜು ಕೊಡುತ್ತಿದ್ದ ವ್ಯಕ್ತಿ ಗೃಹರಕ್ಷಕ ದಳದ ಸಿಬ್ಬಂದಿ ಎನ್ನಲಾಗುತ್ತಿದ್ದು. ರಾಷ್ಟ್ರಪತಿ ಕಾರ್ಯಕ್ರಮದ ಬಂದೂಬಸ್ತ್ ಗೆ ಯಾವೊಬ್ಬ ಗೃಹರಕ್ಷಕ ಸಿಬ್ಬಂದಿ ನಿಯೋಜಿಸಿಕೊಳ್ಳದೆ ಇರೋವಾಗ ವಾಕಿ ಟಾಕಿ ಹಿಡಿದ ಗೃಹ ರಕ್ಷಕ ಸಿಬ್ಬಂದಿ ಯಾರು? ವಾಕಿ ಟಾಕಿ ಯಾರಿಗೆ ಸೇರಿದ್ದು? ಎಸ್ಪಿ ಅಥವಾ ಯಾವ ಇನ್ಸ್ ಪೆಕ್ಟರ್ ಗೆ ನೀಡಲಾದ ವಾಕಿ ಟಾಕಿಯನ್ನ ಗೃಹರಕ್ಷಕ ಸಿಬ್ಬಂದಿಗೆ ನೀಡಿ ಬಂದೂಬಸ್ತ್ ಗೆ ನಿಯೋಜಿಸಲು ಕಾರಣವೇನು? ಎಂಬ ಹತ್ತು ಹಲವಾರು ಪ್ರಶ್ನೆಗಳಿಗೆ ರಾಜ್ಯ ಡಿಜಿಪಿ ಅವರು ಉತ್ತರಿಸಬೇಕು ಅಥವಾ ತನಿಖೆಗೆ ಆದೇಶಿಸಬೇಕಾಗಿದೆ.

ಚಾಮರಾಜನಗರ ಎಸ್ಪಿ ಅವರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು ಹಿರಿಯ ಪೆÇಲೀಸ್ ಅಧಿಕಾರಿಗಳೆ ಉತ್ತರಿಸಬೇಕಾಗಿದೆ.

ಮಿಗಿಲಾಗಿ ಪೆÇಲೀಸ್ ಇಲಾಖೆ ವಾಕಿಟಾಕಿ ಖಾಸಗಿ ವ್ಯಕ್ತಿ ಹಿಡಿದು ಫೋಸ್ ಕೊಡುತ್ತಿರೋದು ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು ರಾಜ್ಯ ಪೆÇಲೀಸ್ ಮಹಾನನಿರ್ದೇಶಕರೆ ಉತ್ತರಿಸಬೇಕಾಗಿದೆ.