(ವಿಡಿಯೋ)
ಚಾಮರಾಜನಗರ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಪರೀಕ್ಷೆ ಸೇರಿದಂತೆ ರಕ್ತ, ಮೂತ್ರ ಪರೀಕ್ಷೆಗೆ ಹೆಚ್ಚಿನ ಹಣ ಪೀಕುತ್ತಿರುವ ಆರೋಪ ಸಂತೇಮರಹಳ್ಳಿ ಆರೋಗ್ಯ ಕೇಂದ್ರದ ವಿರುದ್ಧ ಕೇಳಿಬಂದಿದ್ದು, ಈ ಸಂಬಂಧ ರೋಗಿ ಸಂಬಂಧಿಯೊಬ್ಬರು ಸೆರೆಹಿಡಿದ ವಿಡಿಯೋ ವೈರಲ್ಲಾಗಿದೆ.
ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಲ್ಯಾಬ್ ಸಿಬ್ಬಂದಿ ಒಬ್ಬರು ರೋಗಿ ಸಂಬಂಧಿಯಿಂದ ಹಣ ಪಡೆದು
ಜೇಬಿಗಿಳಿಸಿದ್ದು ರಶೀತಿ ಕೇಳಿದ ವೇಳೆ ಹೆಚ್ಚಿನ ಹಣ ಕೊಡಬೇಕಾಗುತ್ತದೆ ಕೊಡಲೇ ಎಂದು ಪ್ರಶ್ನಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇಷ್ಟೇ ಅಲ್ಲದೇ ರಕ್ತ ಮತ್ತು ಮೂತ್ರ ಪರೀಕ್ಷೆಗಳಿಗೆ ಹೆಚ್ಚಿನ ಹಣವನ್ನು ಪಡೆಯುತ್ತಿರುವ ಆರೋಪ ಕೇಳಿಬಂದಿದ್ದು ಅಲ್ಲಿನ ವೈದ್ಯರಿಗೆ ತಿಳಿದೇ ಇದು ನಡೆಯುತ್ತಿದೆಯೇ ಇಲ್ಲವೇ ಎಂಬುದನ್ನು ಡಿಎಚ್‍ಒ ಪರಿಶೀಲಿಸಬೇಕಿದೆ.
ಕೊರೊನಾ ಕಾಲಘಟ್ಟದಲ್ಲಿ ಖಾಸಗಿ ಆಸ್ಪತ್ರೆಗಳು ಜನರನ್ನು ಸುಲಿಗೆ ಮಾಡಿದವು ಎಂಬ ಅಪವಾದಕ್ಕೆ ಈಗ ಸರ್ಕಾರಿ ಆಸ್ಪತ್ರೆಗಳು ಸೇರಿಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಲಂಚಾವತಾರಕ್ಕೆ ಕಡಿವಾಣ ಹಾಕಬೇಕಿದೆ.
ಈ ಸಂಬಂಧ ಡಿಎಚ್‍ಒ ವಿಶ್ವೇಶ್ವರಯ್ಯ ಅವರನ್ನು ಸಂಪರ್ಕಿಸಿತರಾದರೂ ಸಂಪರ್ಕಕ್ಕೆ ಅವರು ಸಿಗಲಿಲ್ಲ.