ಮೈಸೂರು: ಅಳಿವಿನಂಚಿನಲ್ಲಿರುವ ಪ್ರಾಣಿ ಹಾಗೂ ನರಿ ಚರ್ಮಗಳನ್ನು ಸಾಗಾಣೆ ಮಾಡಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಮೈಸೂರು ಅರಣ್ಯ ಸಂಚಾರಿ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಶಿಕಾರಿಪುರ ಗ್ರಾಮದ ಯಶವಂತ್‌ರಾವ್ ಬಂಧಿತ ಆರೋಪಿ.
ಆರೋಪಿಯಿಂದ 12 ಜೀವಂತ ಉಡಗಳು, ನಾಲ್ಕು ನರಿ ಚರ್ಮಗಳು, ಒಂದು ಪುನುಗು ಬೆಕ್ಕಿನ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.
ನರಿ ಪ್ರಾಣಿಗಳು ನಾಚಿಕೆ ಸ್ವಭಾವ ಹೊಂದಿದ್ದು, ಅಳಿವಿನಂಚಿನಲ್ಲಿರುತ್ತದೆ. ಇವುಗಳ ತಲೆ ಬುರುಡೆಯಲ್ಲಿ ಕೊಂಬಿನಂತಹ ರಚನೆಯಿದ್ದು ಇವುಗಳಿಗೆ ಕಾಳಸಂತೆಯಲ್ಲಿ ಬೇಡಿಕೆಯಿದ್ದು ಇದರ ಚರ್ಮವನ್ನು ಅದೃಷ್ಟವೆಂಬ ಮೂಢನಂಬಿಕೆಯಿಂದ ನರಿ ಬುರುಡೆ ಮತ್ತು ಚರ್ಮ ಮಾರಾಟ ಜಾಲದಲ್ಲಿ ಸಿಲುಕಿದ್ದು, ಪುನುಗುಬೆಕ್ಕು ಪ್ರಾಣಿಯು ಅಳಿವಿನಂಚಿನಲ್ಲಿದ್ದು ಇವುಗಳನ್ನು ಮಾಂಸ ಹಾಗೂ ಚರ್ಮಕ್ಕಾಗಿ ಬೇಟೆಯಾಡಲಾಗುತ್ತದೆ. ಉಡಗಳು ವಾಮಾಚಾರ ಮತ್ತು ಯಾವುದೇ ವೈಜ್ಞಾನಿಕ ಪೂರಾವೆಗಳಿಲ್ಲದ ಔಷದಧಿ ತಯಾರಿಕೆಯಲ್ಲಿ ಬಳಕೆಯಾಗುತ್ತಿದ್ದು, ಬೇಟೆಯಾಡಲಾಗುತ್ತದೆ.
ಮಂಡ್ಯ ಜಿಲ್ಲೆ , ನಾಗಮಂಗಲ ತಾಲ್ಲೂಕು , ಶಿಕಾರಿಪುರ ಗ್ರಾಮದಿಂದ ಪಡುವಲಪಟ್ಟಣಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದಾಗ ಆರೋಪಿಯನ್ನು ಬಂಧಿಸಿ ಆತನ ಮೇಲೆ ಅರಣ್ಯ ಮೊಕದ್ದಮೆ ದಾಖಲಾಗಿದೆ.
ಹಣದ ಆಸೆಗಾಗಿ ಆರೋಪಿ ಸಾಗಣಿಕೆ ಹಾಗೂ ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸಂಚಾರಿದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮನೋಹರ ಸುವರ್ಣ, ವಲಯ ಅರಣ್ಯಾಧಿಕಾರಿ ವಿವೇಕ್, ಉಪ ವಲಯ ಅರಣ್ಯಾಧಿಕಾರಿಗಳಾದ ಪ್ರಮೋದ್, ಡಿ.ಎಂ. ವಿನೋದ್‌ಕುಮಾರ್, ನಾಗರಾಜು,ಅನಿಲ್ ಕುಮಾರ್, ಟಿಸಿ ಸ್ನೇಹ, ಕೆ.ಜೆ ಮೇಘನ, ಅರಣ್ಯ ರಕ್ಷಕರಾದ ಮಾಹಾಂತೇಶ, ಕೋಟೇಶ ಪೂಜಾರ, ಚೆನ್ನಬಸವಯ್ಯ, ವಿರೂಪಾಕ್ಷ, ಉದಯ್ ಕುಮಾರ್ ,ಕುಮಾರ್ ಪ್ರಕಾಶ್ , ದಿವಾಕರ್, ವಾಹನ ಚಾಲಕರಾದ ಮಧು ಮತ್ತು ಪುಟ್ಟಸ್ವಾಮಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.