ಈಜಲು ಕೆರೆಗಿಳಿದ ಬಾಲಕ ಸಾವು

ಚಾಮರಾಜನಗರ: ದಸರಾ ರಜೆ ಕಳೆಯಲು ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ತೆರಳಿದ್ದ SSLC ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ.

ಭೀಮನಬೀಡು ಗ್ರಾಮದ ಕಿರಣ್ ಕುಮಾರ್(15) ಮೃತ ವಿದ್ಯಾರ್ಥಿ.

ಈತ ಮೈಸೂರಿನಲ್ಲಿ SSLC ವ್ಯಾಸಂಗ ಮಾಡುತ್ತಿದ್ದ. ದಸರಾ ರಜೆ ಹಾಗೂ ತನ್ನ ಅಕ್ಕನ ಮದುವೆ ಹಿನ್ನೆಲೆ ಗ್ರಾಮಕ್ಕೆ ಬಂದಿದ್ದ.

ಈ ವೇಳೆ ಸ್ನೇಹಿತರ ಜೊತೆ ಭಾನುವಾರ ಕೆರೆಗೆ ಇಳಿದಿದ್ದಾನೆ. ಕೆರೆ ಆಳಕ್ಕೆ ಧುಮುಕಿದ್ದರಿಂದ ಈಜುಬಾರದೆ ಅಸುನೀಗಿದ್ದಾನೆ ಎಂದು ಸ್ನೇಹಿತರು ತಿಳಿಸಿದ್ದಾರೆ.

ಕೆಲವೇ ದಿನಗಳಲ್ಲಿ ನಡೆಯಲಿದ್ದ ಮದುವೆ ಸಂಭ್ರಮದ ಮನೆಯಲ್ಲಿ ದುಃಖ ಮನೆ ಮಾಡಿದೆ.

ಗುಂಡ್ಲುಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.