ಚಾಮರಾಜನಗರ: ಮೊಲದ ಬೇಟೆಗೆ ತೆರಳಿದ್ದ ಮೂವರು ಯುವಕರಲ್ಲಿ ಓರ್ವ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಕುಮಾರ್(27) ಮೃತ ಯುವಕ.
ಬೆಳೆ ರಕ್ಷಣೆಗೆ ಹಾಕಿದ್ದ ಅಕ್ರಮ ವಿದ್ಯುತ್ ಗೆ ಬಲಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಹುಂಡಿಮನೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ ಜಮೀನಿನ ಸಮೀಪ ಘಟನೆ ನಡೆದಿದ್ದು, ಇವರ ಜಮೀನಿನ ಬದಿಯಲ್ಲೇ ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್ ಅವರ ಜಮೀನು ಕೂಡ ಇದೆ.
ಈ ಬಗ್ಗೆ ಗುಂಡ್ಲುಪೇಟೆ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.