ಪೊಲೀಸರು ಹೆಚ್ಚು ಹೆಚ್ಚು ಕಾನೂನು ಪುಸ್ತಕ ಓದಬೇಕು -ನ್ಯಾಯಾಧೀಶರಾದ ಸದಾಶಿವ ಎಸ್.ಸುಲ್ತಾನ್ ಪುರಿ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ನಗರದ ಜಿಲ್ಲಾ ಪೆÇಲೀಸ್ ಕವಾಯತು ಮೈದಾನದಲ್ಲಿ ಗುರವಾರ ಪೆÇಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾಶಿವ ಎಸ್.ಸುಲ್ತಾನ್ ಪುರಿ ಅವರು ಹುತಾತ್ಮ ಪೆÇಲೀಸರಿಗೆ ಪುಷ್ಪಗುಚ್ಚವಿರಿಸಿ ಗೌರವ ಸಮರ್ಪಿಸಿದರು.

ನಂತರ ಮಾತನಾಡಿದ ನ್ಯಾಯಾಧೀಶರು ಪೆÇಲೀಸರು ಹಬ್ಬ ಹರಿದಿನ ಎನ್ನದೇ ತಮ್ಮ ಸಂತೋಷ ಬದಿಗಿಟ್ಟು ಕಾರ್ಯ ನಿರ್ವಹಿಸುತ್ತಾರೆ. ಅವರ ಕಾರ್ಯಶ್ಲಾಘನೀಯ ಎಂದರು.

ಥ್ಯಾಂಕ್ಸ್ ಲೆಸ್ ಜಾಬ್ ಪೆÇಲೀಸ್ ಇಲಾಖೆಯವರದ್ದಾಗಿದ್ದು ಕಾನೂನನ್ನ ಸಾರ್ವಜನಿಕರು ಗೌರವಿಸಬೇಕು ಹಾಗೂ ಪೆÇಲೀಸರ ಆಡಳಿತದೊಂದಿಗೆ ಸಹಕರಿಸಬೇಕು ಎಂದರು.

ನ್ಯಾಯ ತೀರ್ಪಿನ ಬಗ್ಗೆ ಆಗಾಗ ಮೇಲ್ದರ್ಜೆಗೇರುವ ತೀರ್ಪು ನ್ಯಾಯಾಲಯದಲ್ಲಿ ಹೊರಬರಲಿದೆ ಅದಕ್ಕೂ ಕೂಡ ಪೆÇಲೀಸರು ಅದರಲ್ಲೂ ತನಿಖಾಧಿಕಾರಿಗಳು ಅರಿವು ಮೂಡಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಕಾನೂನು ಪುಸ್ತಕ ಓದುವುದು ಸೂಕ.್ತ ಈ ನಿಟ್ಟಿನಲ್ಲಿ ಠಾಣೆಗಳಲ್ಲಿ ಮಿನಿ ಗ್ರಂಥಾಲಯ ಸ್ಥಾಪಿಸುವುದು ಉತ್ತಮ ಎಂದು ಸಲಹೆ ನೀಡಿದರು.

ಕರ್ತವ್ಯದಲ್ಲಿದ್ದ ಸಮಯದಲ್ಲಿ ಮೃತಪಟ್ಟವರ ಗೌರಾರ್ಪಣೆಯ ಸಲ್ಲಿಸಲು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಹುತಾತ್ಮ ಪೆÇಲೀಸರಿಗೆ ಗೌರವ ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ಪಿ ದಿವ್ಯ ಸಾರಾ ಥಾಮಸ್, ಎಎಸ್ಪಿ ಸುಂದರ್ ರಾಜು, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ, ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ, ಬಂಡಿಪುರ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಆರ್.ನಟೇಶ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕೊಂಡಲು, ಬಿ.ಆರ್.ಟಿ.ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂತೋಷ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಯಿನಿ ದೇವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.