ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಬಾಂಗ್ಲಾದೇಶದಲ್ಲಿ ನವರಾತ್ರಿ ಸಂದರ್ಭದಲ್ಲಿ ಹಿಂದೂಗಳ ಮೇಲಿನ ಹಲ್ಲೆ, ಹತ್ಯೆ ಅತ್ಯಾಚಾರ, ಹಿಂದೂ ಮಂದಿರಗಳ ದ್ವಂಸ ಇವೆಲ್ಲವನ್ನ ತಡೆಯಬೇಕೆಂದು ಬಾಂಗ್ಲಾದೇಶದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟಿಸಿದರು.
ಚಾಮರಾಜನಗರ ಚಾಮರಾಜೇಶ್ವರ ದೇವಾಲಯದಿಂದ ಹೊರಟ ನೂರಾರು ಕಾರ್ಯಕರ್ತರು ಜೋಡಿ ರಸ್ತೆ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಬಾಂಗ್ಲಾದೇಶದಲ್ಲಿ ಖುರಾನ್ ಗೆ ಯಾರೊ ಅಪಮಾನ ಮಾಡಿದ್ದಾರೆ ಎಂಬ ಗಾಳಿ ಸುದ್ದಿಗೆ ಹಿಂದೂ ಮಂದಿರಗಳ ನಾಶ ಮಾಡಲಾಗಿದೆ. ಮನೆಗಳನ್ನ ಸುಡಲಾಗಿದೆ. ಖುಲ್ಲಾದಲ್ಲಿನ ಹಿಂದೂ ದೇವಸ್ಥಾನ ಬಳಿ 18 ಜೀವಂತ ಬಾಂಬ್ ಸಿಕ್ಕಿರುವುದ ಹಿಂದೂಗಳ ವಿರುದ್ದ ಸಂಚಿಗೆ ಪುಷ್ಟಿ ನೀಡುತ್ತದೆ ಎಂದು ಆರೋಪಿಸಿದರು.
ನೋವಾ ಖಲಿಯಲ್ಲಿನ ಹತ್ಯೆ, ಇಸ್ಕಾನ್ ಮೇಲೆ ನಡೆದ ದಾಳಿ, 10 ವರ್ಷದ ಬಾಲಕಿಯನ್ನ ಬಿಡದೆ ಹಿಂದೂ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಬಾಂಗ್ಲಾದಲ್ಲಿ ಹಿಂದೂಗಳ ಬದುಕನ್ನ ಅಸನೀಯಗೊಳಿಸಿದೆ. ಶೇ. 8% ಇರೊ ಹಿಂದೂಗಳು ಭಯದಿಂದ ತತ್ತರಿಸುತ್ತಿದ್ದು ಭೇರತ ಸರ್ಕಾರ ಇಂತಹ ದುಷ್ಕೃತ್ಯ ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳಲು ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರಬೇಕು. ನಿಯೋಗ ರಚಿಸಿ ಅಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಸಮಸ್ಯೆ ಪರಿಹಾರಕ್ಕೆ ್ರಯತ್ನಿಸಬೇಕು. ಹಿಂದೂಗಳ ರಕ್ಷಣೆಗಾಗಿ ಹೊಸ ಕಾನೂನು ತರಲು ಒತ್ತಾಯಿಸಬೇಕು. ಅಲ್ಲಿನ ಹಿಂದೂಗಳಿಗೆ ನ್ಯಾಯ ರಕ್ಷಣೆ ಒದಗಿಸಲು ಭೇರತ ಸರ್ಕಾರ ಕಾರ್ಯೋನ್ಮುಖವಾಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಂದೀಶ್ ಕೆಬ್ಬೇಪುರ, ರಮೇಶ್ ನಾಯಕ್, ಹೇಮಂತ್ ಕುಮಾರ್, ಶರಣು ಸಜ್ಜನ್, ಮಹೇಂದ್ರ, ರಾಜು, ವಿರಾಟ್ ಶಿವು, ಕುಮಾರ್, ಚಂದ್ರಶೇಖರ್ ಹಾಗೂ ಇನ್ನಿತರ ಹಿಂದೂಪರ ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು.