ತುರ್ತು ಚಿಕಿತ್ಸಾ ವಿಭಾಗ ಹಳೆ ಕಟ್ಟಡದಲ್ಲೆ ಮುಂದುವರೆಸುವಂತೆ ಪಂಜಿನ ಮೆರವಣಿಗೆ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ     

ಚಾಮರಾಜನಗರ: ತುರ್ತು ಸೇವೆ ಹಳೆ ಜಿಲ್ಲಾಸ್ಪತ್ರೆ ಕಟ್ಟಡದಲ್ಲೆ ಮುಂದುವರೆಸುವಂತೆ ಆಗ್ರಹಿಸಿ ಕದಂಬ ಸೇನೆ ಸೋಮವಾರ ಪಂಜಿನ ಮೆರವಣಿಗೆ ನಡೆಸಿದರು.

ಚಾಮರಾಜನಗರ ಚಾಮರಾಜೇಶ್ವರ ದೇವಾಲಯದಿಂದ ಹೊರಟು ಭುವನೇಶ್ವರಿ ವೃತ್ತದಲ್ಲಿ ಜಮಾವಣೆಗೊಂಡು ಜಿಲ್ಲಾಸ್ಪತ್ರೆ ಡೀನ್, ಜಿಲ್ಲಾದಧಿಕಾರಿ ವಿರುದ್ದ ದಿಕ್ಕಾರ ಘೋಷಣೆ ಕೂಗಿದರು.

 ನಂತರ ಮಾತನಾಡಿದ ಕಾರ್ಯಕರ್ತರು, ಹೆರಿಗೆ, ಮಕ್ಕಳು, ಕೊವೆಡ್ ಕೇರ್ ಕೇಂದ್ರ ಹೊರತು ಪಡಿಸಿ ಎಲ್ಲಾ ಸೌಲಭ್ಯಗಳನ್ನು ಹೊಸ ಆಸ್ಪತ್ರೆಗೆ ಶಿಪ್ಟ್ ಮಾಡುತ್ತಿರುವುದು ಸಂತೋಷ. ಆದರೆ ತುರ್ತು ಚಿಕಿತ್ಸಾ ವಿಭಾಗ ಸ್ಥಳಾಂತರ ಸೂಕ್ತವಲ್ಲ. ಏಳು ಕಿ.ಮಿ.ದೂರದವರೆಗೆ ರೋಗಿಗಳು ಪ್ರಯಾಸಪಡಬೇಕು. ಖಾಸಗೀಯಾಗಿ ವಾಹನದಲ್ಲಿ ಬಾಡಿಗೆ ಹೋದರೆ ದುಪ್ಪಟ್ಟು ತ್ರಿಪಟ್ಟು ಹಣ ಕೊಟ್ಟು ಅಲೆದಾಡಬೇಲಾದ ದುಸ್ಥಿತಿ ಎದುರಾಗಲಿದೆ. ಹಾಗಾಗಿ ಈ ಕೂಡಲೆ ಆರೋಗ್ಯ ಸಚಿವರು ಜಿಲ್ಲಾಡಳಿತ ಎಚ್ಚೆತ್ತು. ಓಪಿಡಿ, ತುರ್ತು ಚಿಕಿತ್ಸಾ ವಿಭಾಗವನ್ನ ಹಾಲಿ ಇದ್ದ ಸ್ಥಳದಲ್ಲೆ ಮುಂದುವರೆಸಬೇಕೆಂದು ಆಗ್ರಹಿಸಿದರು.