ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಯುವಕನೋಬ್ಬ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ಚಾಮರಾಜನಗರ ಪಟ್ಟಣ ವಲಯದಲ್ಲಿ ರಾತ್ರಿ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಹರದನಹಳ್ಳು ಗ್ರಾಮದ ನಿವಾಸಿ ಬಂಗಾರ (26) ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ.
ಈತ ತಾಲ್ಲೋಕು ಪಂಚಾಯತ್ ಕಚೇರಿಯ ಮುಂದೆ ಇರೊ ಸ್ವಾತಿ ಪಾಸ್ಟ್ ಪುಡ್ ಅಲ್ಲಿ ಕೆಲಸ ಮಾಡುತ್ತಿದ್ದ.
ಚಾಮರಾಜನಗರ-ಕರಿನಂಜನಪುರ ಬೈಪಾಸ್ ಮಾರ್ಗದ ಪರಿಶಿಷ್ಟಜಾತಿ ವರ್ಗದವರಿಗೆ ಸೇರಿದ ಸ್ಮಶಾನದ ಸುತ್ತುಗೋಡೆ ಸಮೀಪ ಇರೋ ಮರದ ಕೊಂಬೆಗೆ ರಾತ್ರಿ ವೇಳೆ ನೇಣಿಗೆ ಶರಣಾಗಿದ್ದಾನೆ.
ಚಾಮರಾಜನಗರ ಪಟ್ಟಣ ಪೆÇಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.