ಬದುಕಿರೊವಾಗಲೆ ನರಕ ಕಾಣುತ್ತಿರೋ ರೋಗಿಗಳು!

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಘನವೆತ್ತ ರಾಷ್ಟ್ರಪತಿಗಳಿಂದ ಉದ್ಘಾಟನೆಗೊಂಡು ಸ್ಮರಣೀಯ ಆಸ್ಪತ್ರೆ ಎನಿಸಿಕೊಂಡಿದ್ದ ಸಿಮ್ಸ್ ನೂತನ ಆಸ್ಪತ್ರೆ ಈಗ ಬಡವರ ಪಾಲಿಗೆ ದೂರವಾಗಿದೆ.

ಅಕ್ಷರಶಃ ಖಾಸಗಿ ಕ್ಲಿನಿಕ್ ಗಳಿಗೆ ಸಿಮ್ಸ್ ನೂತನ ಆಸ್ಪತ್ರೆ ವರವಾಗಿ ಪರಿಣಮಿಸಿದೆ. ಜೊತೆಗೆ ರೋಗಿಗಳು ಬದುಕಿರುವಾಗಲೆ ನರಕಯಾತನೆ ಅನುಭವಿಸಬೇಕಾಗಿದೆ.

450 ಹಾಸಿಗೆ ಸಾಮರ್ಥ್ಯದ ನೂತನ ಸಿಮ್ಸ್ ಆಸ್ಪತ್ರೆ ಸೋಮವಾರದಿಂದ ಕಾರ್ಯಾರಂಭ ಮಾಡಿದ್ದರೂ, ಬಡವರಿಗೆ ಮಾತ್ರ ಅಲ್ಲಿಗೆ ತೆರಳಿ ಚಿಕಿತ್ಸೆ ಪಡೆಯಲಾಗುತ್ತಿಲ್ಲ.

ಜಿಲ್ಲಾ ಕೇಂದ್ರದಿಂದ 7 ಕಿಮೀ ದೂರದಲ್ಲಿರುವ ಎಡಬೆಟ್ಟದಲ್ಲಿ ಆಸ್ಪತ್ರೆ ಇರುವುದರಿಂದ ಅಲ್ಲಿಗೆ ಹೋಗಲು ಯಾವುದೇ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ಬಸ್ ವ್ಯವಸ್ಥೆ ಇಲ್ಲದೆ ಇರೊವಾಗ ಆಸ್ಪತ್ರೆ ಸ್ಥಳಾಂತರ ಮಾಡಿ ಆಟೋ, ಕಾರಿನ ಬಾಡಿಗೆಗೆ 300-400 ರೂ. ಹಣ ಸುರಿಯಬೇಕಾಗಿದೆ.

ಈ ಚಿಕಿತ್ಸೆ ಸರ್ಕಾರಿ ಆಸ್ಪತ್ರೆ ಅಲ್ಲಿ ಪಡೆಯೊ ಬದಲು ಖಾಸಗಿ ಕ್ಲಿನಿಕ್ ಗಳತ್ತ ಬಡಜನರು 100-200 ಕೊಟ್ಟು ಮುಖ ಮಾಡುತ್ತಿದ್ದು ಕ್ಲಿನಿಕ್ ಗಳಿಗೆ ಇದು ವರವಾಗಿ ಪರಿಣಮಿಸಿದೆ.

ಹೆರಿಗೆ ವಿಭಾಗ ಮತ್ತು ಕೋವಿಡ್ ವಾರ್ಡ್ ಹೊರತುಪಡಿಸಿ ಒಪಿಡಿ ಸೇರಿದಂತೆ ಎಲ್ಲ ವಿಭಾಗಗಳನ್ನು ಎಡಬೆಟ್ಟದ ನೂತನ ಆಸ್ಪತ್ರೆಗೆ ವರ್ಗಾಯಿಸಿರುವುದರಿಂದ ಹೊರರೋಗಿ ವಿಭಾಗಕ್ಕೆ ಬರುವವರು ಪರದಾಡುತ್ತಿದ್ದು ನರಕಯಾತನೆ ಅನುಭವಿಸಬೇಕಾಗಿದೆ.

ಮುಂದಿನ ದಿನಗಳಲ್ಲಿ ಬಡವರು ಸಿಮ್ಸ್ ಆಸ್ಪತ್ರೆಯ ಹೊರರೋಗಿ ವಿಭಾಗದಿಂದ ಶಾಶ್ವತವಾಗಿ ದೂರವಾಗುವ ಲಕ್ಷಣ ಗೋಚರಿಸುತ್ತಿದೆ.

ಯಾವುದೇ ಬಸ್ ಸೌಲಭ್ಯವೂ ಇಲ್ಲದೇ ಸ್ವಂತ ವಾಹನ ಆಶ್ರಯಿಸಿ ನೂತನ ಆಸ್ಪತ್ರೆಗೆ ಹೋಗಬೇಕು, ಅಲ್ಲಿ ಹೋದರೆ ಹೋಟೆಲ್ ಗಳಿಲ್ಲ, ಸ್ವಂತ ವಾಹನ ಇಲ್ಲವೆಂದರೇ ಆಟೋದಲ್ಲಿ ಹೋಗಬೇಕಿದ್ದು ನೂರಿನ್ನೂರು ಬಾಡಿಗೆ ಕೇಳುತ್ತಾರೆ, ನೂತನ ಆಸ್ಪತ್ರೆ ನಿರ್ಮಾಣವಾಗಿರುವುದು ಸ್ವಾಗತಾರ್ಹ ಆದರೆ ಒಪಿಡಿ ಸ್ಥಳಾಂತರಿಸಿರುವುದು ಖಾಸಗಿ ಕ್ಲಿನಿಕ್ ಗಳಿಗೆ ವರವಾಗಿದೆ. ಒಪಿಡಿಯನ್ನು ಹಳೇ ಆಸ್ಪತ್ರೆಯಲ್ಲೇ ಉಳಿಸಿಕೊಂಡು ಸೇವೆ ನೀಡಿದರೆ ಬಡವರಿಗೆ ಸಹಕಾರಿ ಆಗಲಿದೆ ಎಂಬುದು ನೊಂದವರ ಆಶಯ.

ಬೀದಿಗಿಳಿದ ಸಂಘಟನೆ: ಸರ್ಕಾರಿ ಜಿಲ್ಲಾಸ್ಪತ್ರೆಯನ್ನ ನೂತನ ಕಟ್ಟಡಕ್ಕೆ ಸ್ಥಳಾಂತರ ಪರಿಣಾಮ ತುರ್ತು ಸೇವೆ, ಓಪಿಡಿ ಸೇವೆ ಇಲ್ಲದೆ ಪರದಾಡುತ್ತಿದ್ದು ಇದನ್ನ ಹಳೆ ಕಟ್ಟದದಲ್ಲೆ ಮುಂದುವರೆಸಬೇಕು. ಉಳಿದಂತೆ ಅಗತ್ಯ ಹೆಚ್ಚಿನ ಸೇವೆ ನೀಡೊವ್ರು ಅಲ್ಲಿ ಪಡೆಯಲಿ ಹಾಗೂ ನೀಡಲಿ. ಆದರೆ ತುರ್ತು ಸೇವೆ ನಿಲ್ಲಿಸಿರುವುದರಿಂದ ಅನಾನುಕೂಲವಾಗಿದೆ ಎಂದು ಸಂಘಟನೆಯೊಂದ ಪಂಜಿನ ಮೆರವಣಿಗೆ ಮಾಡಿ ಪ್ರತಿಭಟಿಸಿದ್ದಾರೆ.

ಒಟ್ಟಾರೆ ಅನಾರೊಗ್ಯ ಪೀಡಿತ ಜನರು ದೂರದವರೆಗೆ ಪ್ರಯಾಣದ ಪ್ರಯಾಸ ದುಸ್ತರವಾಗಿದ್ದು ಖಾಸಗೀ ಆಸ್ಪತ್ರೆಗೆ ಜನ ಮಾರು ಹೋಗುವುದರಲ್ಲಿ ಸಂಶಯವೇ ಇಲ್ಲ. ಜಿಲ್ಲಾಡಳಿತ, ಆರೋಗ್ಯ ಸಚಿವರು ತ್ವರಿತವಾಗಿ ಗಮನ ಹರಿಸಿ ಓಪಿಡಿ, ತುರ್ತುಸೇವೆ ಪಟ್ಟಣ ವ್ಯಾಪ್ತಿಯೊಳಗೆ ಉಳಿಸಬೇಕಾಗಿದೆ.