ವರದಿ:ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ಎಎಸ್ ಐ ರೈತ ಸಂಘದವರು ರೋಲ್ ಕಾಲ್ ಮಾಡೊವ್ರು ಎಂದದ್ದಕ್ಕೆ ರೊಚ್ಚಿಗೆದ್ದು ನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟಿಸಿದರು.
ಸಂಚಾರಿ ಠಾಣೆಯ ಎಎಸ್ಐ ರೇವಣ್ಣಸ್ವಾಮಿ ದಂಡ ಹಾಕುತ್ತಿದ್ದಾಗ ನಿಯಮ ಉಲ್ಲಂಘಿಸಿದ ಸವಾರನಿಗೆ ದಂಡ ಹಾಕಿದ್ದಾರೆ. ಇದನ್ನ ಪ್ರಶ್ನಿಸಿದ ರೈತ ಸಂಘದವರಿಗೆ ನೀವೆನ್ ನಮ್ಮನ್ನ ಕೇಳೊದು ನೀವೆ ರೋಲ್ ಕಾಲ್ ಅವ್ರು ಅಂತ ಹೇಳಿದ್ದಾರೆ.
ಇದರಿಂದ ರೊಚ್ಚಿಗೆದ್ದ ರೈತ ಸಂಘದವರು ಆರೋಪ ಸಾಬೀತು ಪಡಿಸಲಿ ಎಂದು ಎಎಸ್ಐ ಹಾಗೂ ಇತರ ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಭುವನೇಶ್ವರಿ ವೃತ್ತದಲ್ಲಿ ನಡೆದ್ದರಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಇದರಿಂದ ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿದ್ದರಿಂದ ವಾಹನಗಳು ಸಾಲುಗಟ್ಡಿ ನಿಂತದ್ದವು. ಈ ಸಂದರ್ಭದಲ್ಲಿ ಪಟ್ಟಣ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಭೇಟಿ ರೈತರನ್ನು ಮನವೊಲಿಸಿ ಸಮಾಧಾನ ಪಡಿಸಿದರು.