ವರದಿ:ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ರೈತಸಂಘದವರು ರೋಲ್ ಕಾಲ್ ಮಾಡೊವ್ರು ಎಂದದ್ದಕ್ಕೆ ರೊಚ್ಚಿಗೆದ್ದು ನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟಿಸಿದರು.
ಸಂಚಾರಿ ಠಾಣೆಯ ಮುಂಭಾಗ ಗುರುವಾರ ಎಎಸ್‍ಐ ರೇವಣ್ಣಸ್ವಾಮಿ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.
ದಂಡ ಹಾಕುತ್ತಿದ್ದ ಸಂದರ್ಭ ನಿಯಮ ಉಲ್ಲಂಘಿಸಿದ ಸವಾರನಿಗೆ ದಂಡ ಹಾಕಿದ್ದಾರೆ. ಇದನ್ನ ಪ್ರಶ್ನಿಸಿದ ರೈತ ಸಂಘದವರಿಗೆ ನೀವೆನ್ ನಮ್ಮನ್ನ ಕೇಳೊದು ನೀವೆ ರೋಲ್ ಕಾಲ್ ಅವ್ರು ಅಂತ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತ ಸಂಘದವರು ಆರೋಪ ಸಾಬೀತು ಪಡಿಸಲಿ ಎಂದಿದ್ದರು.ಮುಂದುವರೆದು ಸಂಚಾರಿ ಠಾಣಾ ಮುಂಭಾಗ ರಸ್ತೆಯಲ್ಲಿ ಸುಮಾರು ತಾಸುಗಳು ರಸ್ತೆಯಲ್ಲಿ ಕುಳಿತು ಹಿರಿಯ ಅಧಿಕಾರಿಗಳು ಬರೋವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಠಾಣಾ ಮುಂಭಾಗದ ರಸ್ತೆಯಲ್ಲಿಯೇ ಪ್ರತಿಭಟನಾ ನಿರತ ರೈತರು ಊಟ ಮಾಡಿದರು.