ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ:ಲಂಚ ತಗೊಳೊದಷ್ಟೆ ಅಲ್ಲ ಕೊಡೊದು ಕೂಡ ಅಪರಾಧ , ಈ ಕೆಲಸ ಮಾಡಬೇಡಿ ಎಂದು ಜಿಲ್ಲಾ ನ್ಯಾಯಾಧೀಶರಾದ ಸದಾಶಿವ ಎಸ್ ಸುಲ್ತಾನ್ ಪುರಿ ಅವರು ಹೇಳಿದರು.
ಅವರು ಚಾಮರಾಜನಗರ ಕಾನೂನು ಸೇವೆಗಳ ಪ್ರಾಧಿಕಾರದ, ನ್ಯಾಯಾಂಗ ಇಲಾಖೆ, ವಾರ್ತಾ ಇಲಾಖೆ,ವಕೀಲರ ಸಂಘ, ಭ್ರಷ್ಟ ನಿಗ್ರಹ ದಳ ಇವರ ಸಂಯುಕ್ತಾಶ್ರಯದಲ್ಲಿ ಭ್ರಷ್ಟಾಚಾರ ವಿರುದ್ದ ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ನ್ಯಾಯಾಲಯದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರುವ ಮೂಲಕ ಉದ್ಘಾಟಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಲಂಚ ಇಲ್ದೆ ಯಾವ ಕೆಲಸ ಕೂಡ ನಡೆಯುವುದಿಲ್ಲ. ಹಾಗಾಂತ ತೆಗೆದುಕೊಳ್ಳುವುದಕ್ಕಿಂತ ಕೊಡುವವರೆ ಹೆಚ್ಚಾಗಿರುವುದರಿಂದ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಲಂಚ ಪಡೆಯುವುದು ತಪ್ಪಿದ್ದರು ಕೊಡೊದು ಕೂಡ ತಪ್ಪು. ಇದನ್ನ ಪ್ರಜ್ಞಾವಂತ ಜನ ಅರಿಯಬೇಕು. ಉತ್ತಮ ಸಮಾಜ, ಭ್ರಷ್ಟರಹಿತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರ ಸಹಕಾರ ಅಗತ್ಯ. ಭ್ರಷ್ಟಾಚಾರ ಪೋಷಿಸಬೇಡಿ ಎಂದು ಕಿವಿಮಾತು ಹೇಳಿದರು.
ಭ್ರಷ್ಟ ನಿಗ್ರಹ ದಳದ ಡಿವೈಸ್ಪಿ ಸದಾನಂದ ತಿಪ್ಪಣ್ಣನ್ನವರ್ ಮಾತನಾಡಿ, ಲಂಚದ ಪ್ರಕರಣಗಳು ದಾಖಲಾಗುವುದರಲ್ಲಿ ಅಲ್ಪ ಪ್ರಮಾಣ.ಲಂಚ ಪಡೆಯುವುದು ತಪ್ಪು ಅಂತ ಗೊತ್ತಿದ್ದರೂ ವಿಪರೀತವಾಗುತ್ತಿದೆ. ಅಧಿಕಾರಿಗಳು ಲಂಚ ಕೊಡುವ ಜನರ ವಿರುದ್ದವೂ ದೂರು ಕೊಡಬಹುದು ಅಂತ ಪ್ರಕರಣ ದಾಖಲಾದಾಗ ಸ್ವಲ್ಪಮಟ್ಟಿಗೆ ಭಯ ಬರುವುದೇನೊ? ಎಂದರು.
ಐದು ಜಿಲ್ಲೆಗಳ ಪೈಕಿ ಅರಿವು ಕಾರ್ಯಕ್ರಮ ಚಾಮರಾಜನಗರದಲ್ಲಿ ಮೊದಲು ಆರಂಭಿಸಿದ್ದೇವೆ. ಸಾರ್ವಜನಿಕರು, ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಲಂಚದ ಪಿಡುಗು ತೊಲಗಿಸಲು ಕೈ ಜೋಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಗಣಪತಿ ಜಿ ಬಾದಾಮಿ,ಮಹ್ಮದ್ ರೋಷನ್ ಷಾ, ಚಂಪಕಾ, ಸ್ಮಿತಾ, ಭ್ರಷ್ಟ ನಿಗ್ರಹದಳದ ಡಿವೈಸ್ಪಿ ಸದಾನಂದ ತಿಪ್ಪಣ್ಣ, ಆರಕ್ಷಕರಾದ ಕಿರಣ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.