ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಧ್ವಜಾರೋಹಣವನ್ನ ವಸತಿ ಸಚಿವ ಸೋಮಣ್ಣ ಅವರು ನೆರವೇರಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪೊಲೀಸ್ ತುಕಡಿ, ಗೃಹರಕ್ಷಕ ದಳ ಸೇರಿದಂತೆ ಇತರ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಧ್ವಜಾರೋಹಣ ನೆರವೇರಿಸಿದ ಸೋಮಣ್ಣ ಅವರು, ರಾಜ್ಯೋತ್ಸವಕ್ಕೆ ಕಾರಣ ಕರ್ತರನ್ನ ನೆನೆದು, ಸರ್ಕಾರದ ಸಾಧನೆ ಹಾಗೂ ಜಾರಿಗೆ ತಂದಿರೊ ಯೋಜನೆಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾದಧಿಕಾರಿ ರವಿ, ಎಸ್ಪಿ ದಿವ್ಯ, ಎಎಸ್ಪಿ ಸುಂದರರಾಜು, ಜಿ.ಪಂ.ಸಿಇಓ ಗಾಯತ್ರಿ ಸೇರಿದಂತೆ ಇತರರು ಹಾಜರಿದ್ದರು.