ತುರ್ತು ಚಿಕಿತ್ಸಾ ವಿಭಾಗ ಹಳೆ ಕಟ್ಟಡದಲ್ಲೆ ಮುಂದುವರೆಸಲು ಆಗ್ರಹಿಸಿ ಪ್ರತಿಭಟನೆ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ತುರ್ತು ಸೇವೆ ವಿಭಾಗವನ್ನು ಹಳೇ ಜಿಲ್ಲಾಸ್ಪತ್ರೆ ಕಟ್ಟಡದಲ್ಲೆ ಮುಂದುವರೆಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಹಳೇ ಜಿಲ್ಲಾಸ್ಪತ್ರೆ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಚಾಮರಾಜನಗರ ಹಳೇ ಜಿಲ್ಲಾಸ್ಪತ್ರೆ ಮುಂದೆ ಜಮಾವಣೆಗೊಂಡ ಹೋರಾಟಗಾರರು ಜಿಲ್ಲಾಸ್ಪತ್ರೆ ಡೀನ್, ಜಿಲ್ಲಾಧಿಕಾರಿ ವಿರುದ್ದ ಘೋಷಣೆ ಕೂಗಿದರು.

ನಂತರ ಮಾತನಾಡಿದ ಕಾರ್ಯಕರ್ತರು, ಹೆರಿಗೆ, ಮಕ್ಕಳು, ಕೊವಿಡ್ ಕೇರ್ ಕೇಂದ್ರ ಹೊರತು ಪಡಿಸಿ ಎಲ್ಲಾ ಸೌಲಭ್ಯಗಳನ್ನು ಹೊಸ ಆಸ್ಪತ್ರೆಗೆ ಶಿಪ್ಟ್ ಮಾಡುತ್ತಿರುವುದು ಸಂತೋಷ. ಆದರೆ ತುರ್ತು ಚಿಕಿತ್ಸಾ ವಿಭಾಗ ಸ್ಥಳಾಂತರ ಸೂಕ್ತವಲ್ಲ. ಏಳು ಕಿ.ಮಿ.ದೂರದವರೆಗೆ ರೋಗಿಗಳು ಹೋಗಲು ಪ್ರಯಾಸಪಡಬೇಕು. ಅದರ ಬದಲು ಇಲ್ಲೂ ಕೂಡ ತುರ್ತು ಚಿಕಿತ್ಸೆ ಘಟಕ ಮುಂದುವರೆಸಬೇಕು. ಈ ಕೂಡಲೆ ಆರೋಗ್ಯ ಸಚಿವರು ಜಿಲ್ಲಾಡಳಿತ ಎಚ್ಚೆತ್ತು ಓಪಿಡಿ, ತುರ್ತು ಚಿಕಿತ್ಸಾ ವಿಭಾಗವನ್ನ ಹಾಲಿ ಇದ್ದ ಸ್ಥಳದಲ್ಲೇ ಮುಂದುವರೆಸಬೇಕೆಂದು ಆಗ್ರಹಿಸಿದರು.

ಕನ್ನಡ ರಕ್ಷಣ ವೇದಿಕೆ ನಾಗರಾಜು, ಗೋವಿಂದರಾಜು, ಜನಹಿತಾಶಕ್ತಿ ಹೋರಾಟ ವೇದಿಕೆ, ಸುರೇಶ್, ಕದಂಬ ಸೇನೆ ಅಂಬರೀಶ್, ಮುತ್ತುರಾಜು, ಕುಮಾರ್, ಮಣಿಕಂಠ, ಸಿದ್ದಪ್ಪಾಜಿ, ಸಿದ್ದರಾಜು, ಮಂಜುನಾಯಕ್ ಸೇರಿದಂತೆ ಇತರರು ಹಾಜರಿದ್ದರು.