ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಚಾಮರಾಜನಗರ ಜಿಲ್ಲಾಧಿಕಾರಿಯಾಗಿದ್ದ ಡಾ.ಎಂ.ಆರ್. ರವಿರವರನ್ನು ರಾಜ್ಯ ಸರ್ಕಾರ ಯಾವುದೇ ಸ್ಥಳ ನಿಯೋಜನೆ ಮಾಡದೆ ಸೋಮವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಚಾಮರಾಜನಗರ ನೂತನ ಜಿಲ್ಲಾಧಿಕಾರಿಯಾಗಿ ಚಾರುಲತಾ ಸೊಮಾಲ್ ಅವರನ್ನ ಸರ್ಕಾರ ನಿಯೋಜನೆ ಮಾಡಿದೆ.
ಚಾಮರಾಜನಗರ ಜಿಲ್ಲಾಧಿಕಾರಿಯಾಗಿದ್ದ ಡಾ.ಎಂ.ಆರ್. ರವಿ, ಜಿಲ್ಲೆಯ ಮಾಂಬಳ್ಳಿಯವರಾಗಿದ್ದು, ಪ್ರಸ್ತುತ ವಿಧಾನ ಪರಿಷತ್ ಚುನಾವಣೆ ಇರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಅಲ್ಲದೆ ಇವರಿಗೆ ಯಾವುದೇ ಸ್ಥಳ ನಿಯೋಜನೆಯನ್ನು ಮಾಡಿಲ್ಲ. ಮೇ 2ರಂದು ರಾತ್ರಿ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತದಲ್ಲಿ 36 ಮಂದಿ ಸಾವನ್ನಪ್ಪಿದ ಪ್ರಕರಣದಲ್ಲಿ ಎರಡು ಭಾರಿ ವರ್ಗಾವಣೆಯಾಗಿದ್ದರೂ ಸಹ ಸರ್ಕಾರದ ಮೇಲೆ ರಾಜಕಾರಣಿಗಳ ಮೂಲಕ ಪ್ರಭಾವ ಬೀರಿ ಇಲ್ಲೆ ಮುಂದುವರೆದಿದ್ದ ಡಾ.ಎಂ.ಆರ್.ರವಿರವರನ್ನು ವರ್ಗಾವಣೆ ಮಾಡುವಂತೆ ಹಲವಾರು ಸಂಘಟನೆಗಳು ಮತ್ತು ಆಕ್ಸಿಜನ್ ದುರಂತದಲ್ಲಿ ಮಡಿದವರ ಕುಟುಂಬಸ್ಥರು ಒತ್ತಾಯ ಮಾಡುತ್ತಲೇ ಬಂದಿದ್ದರು.
ಕೊನೆಗೂ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ವರ್ಗಾವಣೆಗೆ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಾಗಬೇಕಾಯಿತು.
ಅಂತೂ ಜಿಲ್ಲಾಧಿಕಾರಿಯಾಗಿದ್ದ ಡಾ.ಎಂ.ಆರ್. ರವಿ ವರ್ಗಾವಣೆಯಾಗಿದ್ದಾರೆ.
ನೂತನ ಜಿಲ್ಲಾಧಿಕಾರಿ ಚಾರುಲತ ಸೊಮಾಲ್ ಸೋಮವಾರ ಸಂಜೆ ಚಾಮರಾಜನಗರಕ್ಕೆ ಆಗಮಿಸಿ ನಿರ್ಗಮಿತ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿರವರಿಂದ ಅಧಿಕಾರ ಸ್ವೀಕರಿಸಿದರು.