ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಕೆಲವು ಗ್ರಾಮಗಳಲ್ಲಿ ಇಂದಿಗೂ ರಸ್ತೆಗಳು ಚರಂಡಿಗಳಾಗಿದೆ.
ಗ್ರಾಮದ ಕೆಲವೆಡೆ ಇನ್ನು ಮೂಲಭೂತ ಸೌಕರ್ಯಗಳು ಮರೀಚಿಕೆ.
ಕೇಂದ್ರ, ರಾಜ್ಯ ಸರ್ಕಾರ ಅದೇಷ್ಟೊ ಅನುದಾನ ಗ್ರಾಮಪಂಚಾಯ್ತಿಗಳಿಗೆ ಬಿಡುಗಡೆ ಮಾಡಿದರೂ ಇನ್ನು ಜನರಿಗೆ ಮೂಲಭೂತ ಸೌಕರ್ಯ ದೊರೆಯದೆ ನರಕಯಾತನೆ ಅನುಭವಿಸುತ್ತಿದ್ದಾರೆ.
ಇದಕ್ಕೆ ಕಾರಣ ಗ್ರಾಮಪಂಚಾಯ್ತಿ ಪಿಡಿಓ ಗಳ ನಿರ್ಲ್ಯಕ್ಷತನ ಎಂದರೆ ತಪ್ಪಾಗಲಿಕ್ಕಿಲ್ಲ.
ಚಾಮರಾಜನಗರ ನಾಗವಳ್ಳಿ ಗ್ರಾಮದ ಡಾ. ಬಿ ಆರ್. ಅಂಬೇಡ್ಕರ್ ಹೊಸಬಡವಾಣೆಯ ಇಂಡಿಯನ್ ಬ್ಯಾಂಕ್ ಮುಂಭಾಗ ಮತ್ತು ಹಿಂಭಾಗ ರಸ್ತೆಯಿಂದ ರಾಮಮಂದಿರ ರಸ್ತೆಗಳು ಚರಂಡಿಗಳಾಗಿದೆ.
ರಸ್ತೆಯಲ್ಲೆ ದನಕರು ಕಟ್ಟಿ ಅವು ವಿಸರ್ಜಿಸುವ ತ್ಯಾಜ್ಯಗಳು ಕೂಡ ರಸ್ತೆಗೆ ಹರಿದು ಗಲೀಜು ನೀರು ರೋಗರುಜಿನಗಳಿಗೆ ದಾರಿ ಮಾಡಿಕೊಟ್ಟಿದೆ.
ಇತ್ತೀಚೆಗೆ ಬೀಳುತ್ತಿರೊ ಮಳೆಯಿಂದ ಸುತ್ತಮುತ್ತಲಿನ ಮನೆಗಳಲ್ಲಿರೊ ವೃದ್ಧರು ಹಾಗೂ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ.
ಈ ಸಂಬಂಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಲವಾರು ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು ಕೂಡ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ನಿದ್ದೆಯಲ್ಲಿದ್ದಾರೆ ಎಂದರೆ ತಪ್ಪಾಗಲಾರದು.