ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂದೆ ಇರುವ ಖಾಸಗಿ ಹೋಟೇಲ್ ಬಳಿ ನಿಲ್ಲಿಸಿದ್ದ ಕಾರಿನಲ್ಲಿದ್ದ 9.50 ಲಕ್ಷ ರೂ. ಕಳ್ಳತನವಾಗಿದೆ.
ಅಂಚೆಟ್ಟಿಪುರ ಗ್ರಾಮದ ರೈತ ನಾಗಪ್ಪ, ದುಂಡೇಗೌಡ ಅವರ ಜಮೀನು ಖರೀದಿ ಮಾಡಲೆಂದು 9.50 ರೂ. ಹಣವನ್ನು ತಂದಿದ್ದರು.
ತಾಲೂಕು ಕಚೇರಿಯಲ್ಲಿ ಜಮೀನು ರಿಜಿಸ್ಟರ್ ಪ್ರಕ್ರಿಯೆ ನಡೆಸಿ ಮಧ್ಯಾಹ್ನ ಖಾಸಗಿ ಹೋಟೇಲ್ ಗೆ ಊಟಕ್ಕೆ ಬಂದಾಗ ಕಾರಿನಲ್ಲಿ ಹಣ ಇಟ್ಟು ಒಳಗೆ ಬಂದಿದ್ದರು. ಊಟ ಮುಗಿಸಿ ಕಾರಿನ ಬಳಿಗೆ ಬಂದು ನೋಡಿದಾಗ ಗಾಜು ಹೊಡೆದು ಹಣ ಎಗರಿಸಿರುವುದು ಗೊತ್ತಾಗಿದೆ.
ಸ್ಥಳಕ್ಕೆ ಪಟ್ಟಣ ಠಾಣೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.