ಕೃಷಿ ಕಾಯ್ದೆ ಹಿಂಪಡೆಯಲು ಯಾವುದೇ ರಾಜಕೀಯ ಸ್ವಾರ್ಥ ಇಲ್ಲ -ಕಾರಜೋಳ

ಹುಬ್ಬಳ್ಳಿ: ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಅವರ ಒತ್ತಾಯದ ಮೇರೆಗೆ ಕೃಷಿ ಕಾಯಿದೆಯನ್ನು ಹಿಂಪಡೆಯಲಾಗಿದೆ ಅವರ ಹಿತಕ್ಕಾಗಿಯೇ ಕಾಯಿದೆಯನ್ನು ಹಿಂಪಡೆಯಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಯಾವುದೇ ಕಾನೂನು ಬಂದಾಗ ಹೋರಾಟ ಮಾಡುವುದು ಸಹಜ, ಪ್ರಧಾನಿಯವರ ಈ ನಿರ್ಧಾರವನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.

ವಿಜಯೋತ್ಸವ ಆಚರಿಸಿದ್ದು ರೈತರ ಹಿತದೃಷ್ಟಿಯಿಂದ, ಪ್ರಭುಗಳ ಭಾವನೆಗೆ ಬೆಲೆ ಕೊಟ್ಟು ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಲ್ಲಿ ಯಾವುದೇ ರಾಜಕೀಯ ಸ್ವಾರ್ಥ ಇಲ್ಲ ಎಂದರು.