ಯಲಂಕದಲ್ಲಿ ಮಳೆ ಅವಾಂತರ: ಆತಂಕದಲ್ಲಿ ಜನತೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಯಲಂಕದಲ್ಲಿ ಭಾನುವಾರ 9-30ರವರೆಗೂ ಭಾರಿ ಮಳೆ ಸುರಿದ ಪರಿಣಾಮ ಜಕ್ಕೂರು ರಸ್ತೆಗೆ ಹೊಂದಿಕೊಂಡಿರುವ ಸುರಭಿಲೇಔಟ್ ಗೆ  ನೀರು ನುಗ್ಗಿ ಅವಾಂತರ ವನ್ನೇ ಸೃಷ್ಟಿಸಿದೆ.

ರಾಜಕಾಲುವೆ ತುಂಬಿ ರಸ್ತೆಯಲ್ಲಿ ಎರಡು ಅಡಿ ನೀರು ಹರಿಯುತ್ತಿರುವುದರಿಂದ ಜನ ಹೊರ ಬರಲಾರದೆ ಆತಂಕದಲ್ಲಿದ್ದಾರೆ.

 ಸುರಭಿ ಲೇಔಟ್ ಜನ ಮೊಣಕಾಲುದ್ದದ‌ ನೀರಿನಲ್ಲೆ ನಡೆದು ಹೋಗುತ್ತಿದ್ದಾರೆ.

ಫುಡ್ ಡೆಲಿವರಿ ಬಾಯ್ಸ್, ಎಮರ್ಜೆನ್ಸಿ ವಾಹನ ಸವಾರರು, ಕಾರು ಆಟೋ ಚಾಲಕರು

ಆತಂಕದಲ್ಲೆ‌ ನೀರಿನಲ್ಲೆ ವಾಹನ ತಳ್ಳಿಕೊಂಡು ಸಾಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.

ನೀರಿನಲ್ಲಿ ನಿಂತಿದ್ದ ಬೈಕ್, ಆಟೊ ಕೆಟ್ಟು  ಹೋಗಿದ್ದು ಸವಾರರು ಪರದಾಡುತ್ತಿದ್ದಾರೆ.

ಜಲ ದಿಗ್ಭಂನದಿಂದ ತತ್ತರಿಸಿ ಹೋಗಿರುವ  ಸುರಭಿಲೇಔಟ್ ಜನರನ್ನು ರಕ್ಷಣಾ ತಂಡ ಲೈಫ್ ಬೋಟ್ ಮೂಲಕ ಸಾಗಿಸುತ್ತಿದ್ದಾರೆ.

 ಇಷ್ಟು ಅಲ್ಲದೆ ರಾಷ್ಟ್ರೀಯ ಹೆದ್ದಾರಿ 7ರ ಇಳಿಜಾರಿನ ನೀರು ರಸ್ತೆಗೆ ನುಗ್ಗಿ ಅವಾಂತರವಾಗಿದೆ.

ಜಕ್ಕೂರು ಕೆರೆ ಸೇರೇಕಿರುವ ನೀರು ರಾಜಕಾಲುವೆಗೆ ಸೇರಿ ಅದು ತುಂಬಿ ಹೊರಹರಿಯುತ್ತಿರುವುದರಿಂದ ಇಷ್ಟು ಅನಾಹುತಕ್ಕೆ ಕಾರಣವಾಗಿದೆ.

ರಾತ್ರಿ10-30ವರೆಗೂ ಸುರಿದ ಜೋರು ಮಳೆ ಯಿಂದ ಯಲಹಂಕ ರೈಲ್ವೆ ಅಂಡರ್ಪಾಸ್(ಹೈಸ್ಕೂಲ್ ಕಾಂಪೌಂಡ್) ನಲ್ಲಿ  ಎರಡು ಅಡಿ ನೀರು ನಿಂತಿದೆ.

ಜತೆಗೆ ಯಲಹಂಕ ಉಪನಗರದ ತಗ್ಗು ಪ್ರದೇಶಗಳಿಗೆ, ಸಂಪಿಗೇಹಳ್ಳಿ‌ ಲಿಮಿಟ್ಸ್ ನ ಅಪಾರ್ಟ್ಮೆಂಟ್ ಬೇಸ್ಮೆಂಟ್,

ಚಿಕ್ಕಬೊಮ್ಮಸಂದ್ರದ ಇಳಿಜಾರು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರವಾಗಿದೆ.

ಸುರಭಿಲೇಔಟ್, ಸಪ್ತಗಿರಿ ಲೇಔಟ್,  ಏರ್ಪೋರ್ಟ್ ರಸ್ತೆ, ಕೋಗಿಲು ಕ್ರಾಸ್, ಪೊಲೀಸ್ ಸ್ಟೇಷನ್ ಸರ್ಕಲ್ ಗಳಲ್ಲಿ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಆಗಿತ್ತು.