ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಅಪರಿಚಿತ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಮೂವರು ಧಾರುಣವಾಗಿ ಸಾವನ್ನಪ್ಪಿದ ಘಟನೆ ಗ್ರಾಮಾಂತರ ಠಾಣಾ ವಲಯದಲ್ಲಿ ಗುರುವಾರ ನಡೆದಿದೆ.
ಚೆನ್ನಿಪುರ ಮೋಳೆ ಗ್ರಾಮದ ಲೇ.. ರಾಚಶೆಟ್ಟಿ ಅವರ ಮಗ ಅಶೋಕ್ (27) ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಗ್ರಾಮಾಂತರ ಠಾಣಾ ವಲಯದಲ್ಲಿ ಇರುವ ಮರಿಯಾಲ ಸೇತುವೆ ಬಳಿ ಅಪಘಾತವಾಗಿದ್ದು ಚಾಮರಾಜನಗರದಿಂದ ಬೇಡರಪುರ ಗ್ರಾಮದ ಮನೆಗೆ ತೆರಳುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.
ಚಾಮರಾಜನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆ ನಿರ್ಲ್ಯಕ್ಷ
ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದ ಪರಿಣಾಮ, ದಂಡ ವಿಧಿಸದೆ ಕರ್ತವ್ಯ ಲೋಪ ಎಸಗುತ್ತಿರುವುದರಿಂದ ದಿನದ 24 ಗಂಟೆಯ ಅವದಧಿಯೊಳಗೆ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ.
ಪಟ್ಟಣದೊಳಗೆ ದಾಖಲೆಯಿಲ್ಲದ ವಾಹನ ಸಂಚಾರ, ಅಪ್ರಾಪ್ತರಿಂದ ವಾಹನ ಚಾಲನೆ, ರಸ್ತೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೂ ಪೊಲೀಸರು ಮೌನವಹಿಸಿದ್ದಾರೆ. ಪಟ್ಟಣದ ಒಳಗೆ ನೂರೆಂಟು ಸಮಸ್ಯೆ ಇದ್ದರೂ ಊರ ಹೊರಗೆ ನಿಂತು ದಂಡ ಹಾಕೊದೆ ಒಂದು ಕಾಯಕವನ್ನಾಗಿಸಿಕೊಂಡು ಜಾಗೃತಿ ಮೂಡಿಸುವಲ್ಲಿ ಪೊಲೀಸ್ ಇಲಾಖೆ ವೈಫಲ್ಯ ತೋರಿದೆ ಎಂದರೆ ತಪ್ಪಾಗಲಾರದು.
ಆರಂಭದಲ್ಲಿ ಎಸ್ಪಿ ದಿವ್ಯ ಅವರು ಹೆಲ್ಮೆಟ್ ಜಾಗೃತಿ ಮೂಡಿಸಿ ಸೈಲೆಂಟಾದವರು ಇದರ ಬಗ್ಗೆ ಕಾಳಜಿ ತೋರದೆ ಮೌನವಹಿಸಿ ಬಿಟ್ಟರು.