ಚಾಮರಾಜನಗರ: ಅಕ್ರಮ ಬಗ್ಗೆ ಸುದ್ದಿ ಹಾಕಿದ್ದಕ್ಕೆ ಪತ್ರಕರ್ತನ ಮೇಲೆ ಜಾತಿನಿಂದನೆ ಪ್ರಕರಣ ದಾಖಲಿಸಿ ಬಡಿರೀ ಅಮ್ಯಾಲೆ ನೋಡಿಕೊಳ್ಳೋಣ ಎಂಬ ವಿಡಿಯೊ ಇದೀಗ ವೈರಲ್ ಆಗಿದೆ.
ಚಾಮರಾಜನಗರ ಜಿಲ್ಲೆಯ ಅಮಚವಾಡಿ ಗ್ರಾಮ ಪಂಚಾಯ್ತಲ್ಲಿ ಜಮೀನಿನಲ್ಲಿ ಮಣ್ಣು ಸಾಗಾಣಿಕ ಸಂಬAದ ಸುದ್ದಿ ಹಾಕಿ ಪತ್ರಕರ್ತ ರಾಜೇಂದ್ರ ಎಂಬವರು ಕಂದಾಯ ಅದಿಕಾರಿಗಳ ಗಮನ ಸೆಳೆದಿದ್ದರು.
ಈ ನಡುವೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಇಟ್ಟಿಗೆಗೂಡಿಗೆ ಅಕ್ರಮ ಮಣ್ಣು ಸಾಗಿಸುತ್ತಿದ್ದಾರೆ. ಅದನ್ನ ಪ್ರಶ್ನೆ ಮಾಡಲು ತಹಶೀಲ್ದಾರ್ ಗೆ ತಾಕತ್ ಇಲ್ಲವೆ ಎಂಬುದರ ಬಗ್ಗೆಯೂ ಸುದ್ದಿ ಪ್ರಕಟವಾಗಿತ್ತು. ತಕ್ಷಣವೆÀ ಪತ್ರಕರ್ತನ ವಿರುದ್ಧ ತನಿಖೆಗೆ
ಜಾತಿನಿಂದನೆ ಪ್ರಕರಣ ದಾಖಲಿಸಿ, ಆತನನ್ನ ಬಡಿಯಿರಿ ನಂತರ ನಾವು ನೋಡಿಕೊಳ್ಳುತೇವೆ ಎಂಬ ವಿಡಿಯೊ ಬಿಡುಗಡೆಯಾಗಿದ್ದು ಅದೀಗ ವೈರಲ್ ಆಗಿದೆ.
ಪ್ರಕರಣ ದಾಖಲಿಸಿಕೊಳ್ಳಬೇಕಾದ ಪೊಲೀಸರು ಮೌನವಹಿಸಿರುವುದು ನೋಡಿದರೆ ಪೊಲೀಸರು ಕೂಡಾ ಅಕ್ರಮ ಬೆಂಬಲಿಸುತ್ತಿದ್ದಾರಾ ಎಂಬ ಅನುಮಾನಗಳು ಮೂಡಿಸುತ್ತಿದೆ.
ಒಟ್ಟಾರೆ ಯಾವುದೇ ಅಕ್ರಮ ನಡೆದರೂ ಸುದ್ದಿ ಹಾಕುವಂತಿಲ್ಲ ಎಂಬAತಾಗಿದೆ.