ಜ್ವರದಿಂದ ಶಾಲಾ ಬಾಲಕಿ ಸಾವು: ಪೋಷಕರಲ್ಲಿ ತೀವ್ರ ಆತಂಕ

ಚಾಮರಾಜನಗರ: ಶಾಲಾ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು ಕೆಲವರಲ್ಲಿ ಆತಂಕ ಮೂಡಿಸಿದೆ.

ತೀವ್ರ ಜ್ವರದಿಂದ ಶಾಲಾ ಬಾಲಕಿ ಸಾವನ್ನಪ್ಪಿದ್ದಾಳೆ.

ಈ ಮಾಹಿತಿ ಹೊರಬೀಳುತ್ತಿದ್ದಂತೆ  ಮಕ್ಕಳ ಪೋಷಕರಲ್ಲಿ ತೀವ್ರ ಆತಂಕ  ಮನೆ ಮಾಡಿದೆ.

ಚಾಮರಾಜನಗರ ತಾಲ್ಲೂಕಿನ ರಾಮಸಮುದ್ರ ಸಮೀಪ ಇರುವ ಸಂತ ಪ್ರಾನ್ಸಿಸ್ ಶಾಲೆಯ ಐ.ಸಿ.ಎಸ್.ಇ  4ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎ.ಜಿ.ಯುಕ್ತ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ.

ಬಾಲಕಿಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಶಾಲೆಯ ಆಡಳಿತ ಮಂಡಳಿ ಯಾವುದೇ  ಉತ್ತರ ನೀಡಿಲ್ಲ. ಆದರೆ  ಶಾಲೆಗೆ ರಜೆ  ಘೋಷಿಸಲಾಗಿದೆ.

ಜ್ವರದಿಂದ ಮಗು ಸಾವನ್ನಪ್ಪಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಕೆಲ ಪೋಷಕರು   ಆತಂಕಕ್ಕಿಡಾಗಿದ್ದಾರೆ ಜತೆಗೆ ಊಹಾಪೋಹದ ಸುದ್ದಿಗಳು ಹರಿದಾಡುತ್ತಿವೆ.