ಇಂಗ್ಲೀಷ್ ನಲ್ಲಿ ಡೈಲಾಗ್ ಹೇಳಿ ವ್ಯಾಕ್ಸಿನ್ ನಿರಾಕರಿಸಿದ ವೃದ್ಧನ ವಿಡಿಯೋ ವೈರಲ್

ಚಾಮರಾಜನಗರ: ಲಸಿಕೆ ಹಾಕಲು ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿದ್ದ ವೇಳೆ ಇಂಗ್ಲೀಷ್ ನಲ್ಲಿ ಡೈಲಾಗ್ ಹೇಳುವ ಮೂಲಕ ವೃದ್ಧನೋರ್ವ ವ್ಯಾಕ್ಸಿನ್ ನಿರಾಕರಿಸಿರುವ ಹಳೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಚಾಮರಾಜನಗರ ತಾಲೂಕಿನ ಬ್ಯಾಡಮೂಡ್ಲು ಗ್ರಾಮದಲ್ಲಿ ಕಳೆದ 2-3 ತಿಂಗಳುಗಳ ಹಿಂದೆ ಈ ಘಟನೆ ನಡೆದಿದೆ.

ನರ್ಸ್ ಮತ್ತು ಆಶಾ ಕಾರ್ಯಕರ್ತೆಗೆ ಐ ಡೋಂಟ್ ಲೈಕ್, ಐ ಡೋಂಟ್ ಕೇರ್, ಸ್ಟಾಪ್ ಮೀ ಎಂದೆಲ್ಲಾ ಡೈಲಾಗ್ ಹೇಳುವ ಮೂಲಕ ವೃದ್ಧನೋರ್ವ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾನೆ.

ಲಸಿಕೆ ಹಾಕಿಸಿಕೊಂಡ್ರೆ 100 ವರ್ಷ ಬದುಕ್ತೀನಾ?, 100 ವರ್ಷ ಬದುಕುವ ಹಾಗಿದ್ರೆ ಮಾತ್ರ ಲಸಿಕೆ ಕೊಡಿ. ಇಲ್ಲಾಂದ್ರೆ ಬೇಡ, ವ್ಯಾಕ್ಸಿನ್ ಹಾಕಿಸಿಕೊಂಡರೂ ಸಾಯ್ತಿನಿ, ಇಲ್ಲದಿದ್ದರೂ ಸಾಯ್ತಿನಿ. ಐ ಡೋಂಟ್ ಕೇರ್ ಕೊರೊನಾ ಎಂದು ಕುಟುಂಬ ಸದಸ್ಯರ ಮುಂದೆಯೇ ವೃದ್ಧ ವಾಗ್ದಾಳಿ ನಡೆಸಿದ್ದಾನೆ.