ಮೈಸೂರು: ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಎರಡು ದೇವಸ್ಥಾನಗಳ ದೇವರ ವಿಗ್ರಹಗಳನ್ನು ಧ್ವಂಸ ಮಾಡಿದ ಪ್ರಕರಣ ಸಂಬಂಧ ಮೈಸೂರು ಜಿಲ್ಲಾ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯು ಕೆ.ಆರ್.ನಗರ ತಾಲೂಕು ಚಿಕ್ಕಬೇರ್ಯ ಗ್ರಾಮದವನಾಗಿದ್ದು, ಆತನನ್ನು ಕೆ.ಆರ್ ಪೇಟೆಯ ಬೀರವಳ್ಳಿ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಎರಡು ದೇಗುಲಗಳ ವಸ್ತುಗಳು ಹಾಗೂ ಮತ್ತೆರಡು ದೇವಾಲಯಗಳ ವಿಗ್ರಹಗಳನ್ನು ಹಾಳು ಮಾಡಿದ ವಿಷಯ ಗೊತ್ತಾದ 24 ಗಂಟೆಗಳಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದು ಕೋಮುಗಲಭೆಯನ್ನು ಉಂಟುಮಾಡುವಂತಹ ಸೂಕ್ಷ್ಮ ವಿಷಯವಾದ್ದರಿಂದ ತನಿಖೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು.