ಶಬರಿ ಮಲೆಗೆ ಹೋಗಲು ಗ್ರೀನ್ ಸಿಗ್ನಲ್

ಕೇರಳ: ಕೇರಳದಲ್ಲಿ ದಿನೇದಿನೇ ಕೊರೊನ ಸೋಂಕು ಕಡಿಮೆಯಾಗುತ್ತಿರುವುದರಿಂದ ಶಬರಿಮಲೆ ದೇಗುಲಕ್ಕೆ ಹೋಗಲು ಭಕ್ತರಿಗೆ ಸರ್ಕಾರ ಅವಕಾಶ ನೀಡಿದೆ.

ಕೇರಳದಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾದ ಹಿನ್ನೆಲೆಯಲ್ಲಿ ಅಯ್ಯಪ್ಪಸ್ವಾಮಿ ಸನ್ನಿಧಿಗೆ ಪಂಪಾದಿಂದ ನೀಲಮಲ ಮಾರ್ಗದಲ್ಲಿ ತೆರಳಲು ಅವಕಾಶ ನೀಡಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಮಾರ್ಗಮಧ್ಯೆ ಆರೋಗ್ಯ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ.

ಕಳೆದ ವರ್ಷ ಶಬರಿಮಲೈಗೆ ಹೋಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಭಕ್ತರು

ಕೋಟೆನಾಡು ಚಿತ್ರದುರ್ಗದ ಸುಕ್ಷೇತ್ರದತ್ತ  ತೆರಳಿದ್ದರು.

ಇರುಮುಡಿ ಹೊತ್ತ ಮಾಲಾಧಾರಿಗಳು ಚಿತ್ರದುರ್ಗ ನಗರದ ಮೇದೆಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಶಬರಿಮಲೈ ಮಾದರಿಯಲ್ಲೇ18 ಮೆಟ್ಟಿಲುಗಳನ್ನು ಏರಿ ಆಶೀರ್ವಾದ ಪಡೆಯುತ್ತಿದ್ದರು. ಈಗ ಶಬರಿಮಲೈಗೆ ಹೋಗಿ ಅಯ್ಯಪ್ಪನ ದರುಶನ ಪಡೆಯಲು ಉತ್ಸುಕರಾಗಿದ್ದು, ಭಕ್ತರು ಅತ್ತ ತೆರಳುತ್ತಿದ್ದಾರೆ.