ಇಬ್ಬರು ಪೊಲೀಸರು ಎಸಿಬಿ ಬಲೆಗೆ

ಮೈಸೂರು:ಮೈಸೂರಿನ ಇಬ್ಬರು ಪೊಲೀಸರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯ ಎಸ್ ಐ ರಾಘವೇಂದ್ರ ಮತ್ತು ದಫೇದಾರ ಸುರೇಶ್ ಲಂಚ ಪಡೆಯುತ್ತಿದ್ದಾಗಲೆ ರೆಡ್ ಹ್ಯಾಂಡ್ ಅಗಿ ಸಿಕ್ಕಿಬಿದ್ದಿದ್ದಾರೆ.

ವಿದ್ಯಾರಣ್ಯಪುರಂ ನಿವಾಸಿ ಗುರುಸ್ವಾಮಿ ಎಂಬುವರು ನಮ್ಮ ಮನೆಯ ಬಾಡಿಗೆದಾರರು ಸರಿಯಾಗಿ ಬಾಡಿಗೆ ನೀಡುತ್ತಿಲ್ಲ ಹಾಗಾಗಿ ಅವರನ್ನು ಮನೆಯಿಂದ ಖಾಲಿ ಮಾಡಿಸಿಕೊಡಿ ಎಂದು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಎಸ್ ಐ ರಾಘವೇಂದ್ರ ದಪೇದಾರ ಸುರೇಶ್ ಎಂಬವರು ಲಂಚ ನೀಡುವಂತೆ ಕೇಳಿದ್ದಾರೆ.

ವಿಷಯ ತಿಳಿದ ಎ.ಸಿ.ಬಿ ತಂಡ ತಕ್ಷಣ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಧಾವಿಸಿ  ಎಸ್.ಐ ರಾಘವೇಂದ್ರ ಮತ್ತು ದಫೇದಾರ ಸುರೇಶ್ ಅವರನ್ನು ಬಂಧಿಸಿ ಲಂಚದ ಹಣ 1.500 ರೂಗಳನ್ನು ವಶಪಡಿಸಿಕೊಂಡಿದ್ದಾರೆ.