ಮತಾಂತರ ನಿಷೇಧ ಕಾಯ್ದೆ ಇದೇ ಅಧಿವೇಶನದಲ್ಲಿ ಪಾಸ್ ಆಗಲಿದೆ -ಬಿ ಎಸ್ ವೈ

ಹುಬ್ಬಳ್ಳಿ:ಮಂಗಳವಾರ ವಿಧಾನ ಪರಿಷತ್ ಫಲಿತಾಂಶ ಬರುತ್ತದೆ ನಾವು ಕನಿಷ್ಠ 15 ಸೀಟ್ ಗಳನ್ನ ಗೆಲ್ಲುತ್ತೇವೆ ಎಂದು

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ  ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಈ ಗೆಲುವಿನಿಂದ ವಿಧಾನ ಪರಿಷತ್ ನಲ್ಲಿ ನಮಗೆ ಬಹುಮತ ಸಾಬೀತು ಆಗುತ್ತದೆ. ಜನ ನಮಗೆ ಆಶೀರ್ವಾದ ಮಾಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಹೇಳಿದರು.

ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗಳು ಮತ್ತು ಹಲವು ತೀರ್ಮಾನಗಳು ಆಗುತ್ತವೆ ಎಂದರು.

ಮತಾಂತರ ನಿಷೇಧ ಕಾಯ್ದೆ ಜಾರಿ ಬಗ್ಗೆ ಪ್ರತಿಕ್ರಿಯಿಸಿದ ಬಿ ಎಸ್ ವೈ ಕಾಂಗ್ರೆಸ್ ನವರ ವಿರೋಧ ಇದ್ದೆ ಇರುತ್ತದೆ ಎಂದು ಹೇಳಿದರು.

ಹಲವು ರಾಜ್ಯಗಳಲ್ಲಿ ಮತಾಂತರ ಕಾಯ್ದೆ ಜಾರಿ ಆಗಿದೆ, ಮತಾಂತರ ನಿಷೇಧ ಕಾಯ್ದೆ ಇದೇ ಅಧಿವೇಶನದಲ್ಲಿ ಪಾಸ್ ಆಗಲಿದೆ. ಅಧಿವೇಶನ ಮುಗಿಯುವ ಕೆಲ ಎರಡು ಮೂರು ದಿನಗಳ ಒಳಗೆ ಕಾಯ್ದೆ ಜಾರಿ ಆಗಲಿದೆ ಎಂದು ತಿಳಿಸಿದರು.

ಮತಾಂತರ ನಿಷೇಧ ಕಾಯ್ದೆ ಬರಬೇಕೆಂಬುದು ಕೇವಲ ನನ್ನ ಅಭಿಪ್ರಾಯ ಅಷ್ಟೇ ಅಲ್ಲ ಎಲ್ಲರ ಅಭಿಪ್ರಾಯವನ್ನೂ ಸಂಗ್ರಹಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಬಸವರಾಜ ಬೊಮ್ಮಾಯಿಗೆ ಬಿಜೆಪಿ ನಾಯಕರಿಂದ ಸಹಕಾರ ಸಿಗುತ್ತಿಲ್ಲ ಎಂಬ ಬಸವರಾಜ ರಾಯರೆಡ್ಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅದರಲ್ಲಿ ಸತ್ಯಾಂಶ ಇಲ್ಲ, ಬೊಮ್ಮಾಯಿಯವರಿಗೆ ಎಲ್ಲ ರೀತಿಯ ಸಹಕಾರ ಸಿಗುತ್ತಿದೆ

ಅವರ ಅವಧಿಯನ್ನ ಬೊಮ್ಮಾಯಿ ಪೂರ್ಣಗೊಳಿಸುತ್ತಾರೆ ಎಂದರು.