ಸಂಗೀತ ಸಂಯೋಜಕ ಎ.ಆರ್. ರೆಹಮಾನ್‍ಗೆ ಕೋರ್ಟ್ ನೋಟಿಸ್

ಚೆನ್ನೈ: ಸಂಗೀತ ಸಂಯೋಜಕ ಎ.ಆರ್. ರೆಹಮಾನ್‍ಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ.
ಆದಾಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರ್ಟ್ ಎ.ಆರ್. ರೆಹಮಾನ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಐಟಿ ಇಲಾಖೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಟಿ.ಎಸ್. ಶಿವಜ್ಞಾನಂ ಮತ್ತು ವಿ. ಭವಾನಿ ಸುಬ್ಬರಾಯನ್ ನೇತೃತ್ವದ ವಿಭಾಗೀಯ ಪೀಠ ರೆಹಮಾನ್‍ಗೆ ನೋಟಿಸ್ ನೀಡಿದೆ.
ರಹಮಾನ್ ತಮ್ಮ ಚಾರಿಟಬಲ್ ಟ್ರಸ್ಟ್ ಗೆ ಅಕ್ರಮವಾಗಿ 3.47 ಕೋಟಿ ರೂ.ವರ್ಗಾಯಿಸುವ ಮೂಲಕ ತೆರಿಗೆ ವಂಚಿಸಿದ್ದಾರೆ ಎಂದು ಐಟಿ ಇಲಾಖೆ ಅರ್ಜಿಯಲ್ಲ್ಲಿ ತಿಳಿಸಿದೆ.