ಅಭಿನಯಕ್ಕೆ ದೇಹದ ಅಂಗಗಳೂ ಬೇಕು!

-ಜಿ.ಆರ್.ಸತ್ಯಲಿಂಗರಾಜು
ಅಭಿನಯದಲ್ಲಿ ನವರಸಗಳು ಹಾಸು ಹೊಕ್ಕಾಗಿರುತ್ತವೆ.
ಇದರ ಜತೆಗೆ ಕಣ್ಣುಗಳಿಂದಲೇ ಸೂಚಿಸಬಹುದು. ಆದರಲ್ಲಿ ಸ್ಥಾಯಿ ಭಾವ ನೋಟಗಳು 8 ಇವೆ.
ಸಂಚಾರಿ ಭಾವನೋಟಗಳು 20: ಹುಬ್ಬು 7: ರೆಪ್ಪೆ 9: ಕೆನ್ನೆ 6: ವಾಯು 19: ತುಟಿ 10: ಹಲ್ಲು 8: ನಾಲಗೆ 7: ಗಡ್ಡ 8: ಮುಖವನ್ನ 6 ರೀತಿ ಅಭಿನಯಿಸುವ ಮುಖೇನ ಭಾವನೆ ವ್ಯಕ್ತಪಡಿಸಬಹುದು.
ಇವುಗಳ ಜತೆಗೆ ಹಿಮ್ಮಡಿ 8: ಕೀಲು 5: ಕೈಬೆರಳು 7: ಕಾಲ್ಬೆರಳು 5: ಅಂಗಾಲುನಿಂದಲೂ 6 ರೀತಿ ಭಾವನೆ ತೋರಿಸಬಹುದು. ಇವಲ್ಲದೆ ಹಸ್ತ, ಕೈಗಳು, ತೋಳು ಮತ್ತಿತರೆ ಅಂಗಗ¼ ಚಲನೆಯೂ ಪ್ರತ್ಯೇಕ ಭಾವ ಸ್ಪುರಿಸುತ್ತವೆ.
ದೇಹದ ಯಾವ ಅಂಗ ಯಾವ ಅಭಿನಯ, ಅರ್ಥ ಸೂಚಿಸುತ್ತೆ ಎಂಬ ಪೂರ್ಣ ವಿವರ ಭರತನ ನಾಟ್ಯಶಾಸ್ತ್ರ, ಸಿಂಹಭೂಪಾಲರ ಲಾಸ್ಯ ರಂಜನದಲ್ಲಿ ಇವೆ.