ಅಭಿರಾಮ್ ಅವರ ಕಾರ್ಯವೈಖರಿ ಪ್ರಶಂಸನೀಯ -ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಅನಿರೀಕ್ಷಿತವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕನಾದಾಗ ನಮ್ಮ ಸ್ನೇಹಿತರು ಮೈಸೂರು ಜಿಲ್ಲಾಧಿಕಾರಿ ಸಮರ್ಥವಾಗಿದ್ದಾರೆ, ನೀವು ನಿಶ್ಚಿಂತೆಯಂತೆ ಇರಬಹದು ಎಂದು ತಿಳಿಸಿದ್ದರು. ಅದು ಅಭಿರಾಮ್ ಅವರ ಒಡನಾಟದಲ್ಲಿ ಸಾಬೀತಾಯಿತು ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.
ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಎರಡು ವರ್ಷ ನಾಲ್ಕು ತಿಂಗಳ ಕಾಲ ಸಮರ್ಥವಾಗಿ ಕಾರ್ಯನಿರ್ವಹಿಸಿದ ಅಭಿರಾಮ್ ಜಿ. ಶಂಕರ್ ಅವರಿಗೆ ಶುಕ್ರವಾರ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ನಾನು ಅನೇಕ ಜಿಲ್ಲಾಧಿಕಾರಿಗಳನ್ನು ನೋಡಿದ್ದೇನೆ. ಸಾರ್ವಜನಿಕರಿಗೆ ಸ್ವಂದಿಸಿ, ಅಭಿವೃದ್ಧಿ ಕಾರ್ಯವನ್ನು ಅತ್ಯಂತ ಪ್ರಮಾಣಿಕವಾಗಿ ಮಾಡುವ ಅಭಿರಾಮ್ ಅವರ ಕಾರ್ಯವೈಖರಿ ಪ್ರಶಂಸನೀಯ ಎಂದರು.
ಅಭಿರಾಮ್ ಅವರು ಜಿಲ್ಲಾಧಿಕಾರಿಯಾಗಿ ಎಂದೂ ಯಾರ ಮೇಲೂ ದರ್ಪ ಮೆರೆಯಲಿಲ್ಲ. ಅವರು ಸಾರ್ಜನಿಕರಿಗೆ ಸ್ವಂದಿಸಿ, ಗೌರವಿಸಬೇಕು ಎಂಬ ಮನೋಭಾವ ಇಟ್ಟುಕೊಂಡಿರುವವರು. ಅದರಂತೆ ಜನಸಾಮಾನ್ಯರ ನೋವು ನಲಿವಿಗೆ ಸ್ಪಂದಿಸಿ, ಮೈಸೂರಿನ ಜನತೆ ಮೆಚ್ಚುವಂತೆ ಕೆಲಸ ಮಾಡಿದ್ದಾರೆ ಎಂದರು.
ಇವರು ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಎಲ್ಲಿಯೂ ಮುಜುಗರವಾಗದ ರೀತಿಯಲ್ಲಿ ತಮ್ಮ ಕೆಲಸ ನಿರ್ವಹಣೆ ಮಾಡಿದ್ದಾರೆ. ವಿರೋಧ ಪಕ್ಷವಾಗಲಿ, ಆಡಳಿತ ಪಕ್ಷದಲ್ಲಾಗಲಿ ಎಲ್ಲಿಯೂ ಅವರ ವಿರುದ್ಧ ಟೀಕೆ ಕಾಣಲಿಲ್ಲ. ಸಮಸ್ಯೆಗಳನ್ನು ಹೇಳಿದ ತಕ್ಷಣ ಸ್ಪಂದಿಸುವ ಗುಣ ಅವರದ್ದು ಎಂದು ಸ್ಮರಿಸಿದರು.
ಇಂತಹ ಪ್ರಮಾಣಿಕ ಜಿಲ್ಲಾಧಿಕಾರಿ ಜೊತೆ ಕೆಲಸ ಮಾಡಿರುವುದು ನನ್ನ ಅದೃಷ್ಟ. ಆದರೆ ಅದು ಹೆಚ್ವು ದಿನ ಕೂಡಿ ಬರಲಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾಧಿಕಾರಿಗಳು ನಡೆದುಕೊಳ್ಳುತ್ತಿದ್ದರು. ಅದರಂತೆ ನಮಗೂ ತಿಳಿಸುತ್ತಿದ್ದರು. ನಾವು ಕೂಡ ಅವರ ಮಾತಿಗೆ ಸಹಕಾರ ನೀಡುತ್ತಿದ್ದೆವು. ಅದೇ ಸಹಕಾರವನ್ನು ಮುಂದೆಯೂ ಈಗಿನ ಜಿಲ್ಲಾಧಿಕಾರಿಗಳಿಗೆ ನೀಡುತ್ತೇವೆ ಎಂದು ತಿಳಿಸಿದರು.
ದಸರಾ ಉದ್ಘಾಟನೆಯನ್ನು ಕೊರೊನಾ ವಾರಿಯರ್ಸ್ ಮಾಡಬೇಕೆಂದು ಮುಖ್ಯಮಂತ್ರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅತ್ಯುತ್ತಮವಾಗಿ ಮೈಸೂರು ಜಿಲ್ಲೆಯ ಜನತೆಗೆ ಸೇವೆ ಸಲ್ಲಿಸಿದ ಅಭಿರಾಮ್ ಅವರನ್ನು ಆಯ್ಕೆ ಮಾಡುವ ಸಂಬಂಧ ಅವರ ಅನುಕೂಲವನ್ನು ತಿಳಿದು ಮುಂದಿನ ದಿನಗಳಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಮರಿತಿಬ್ಬೇಗೌಡ, ಹರ್ಷವರ್ಧನ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ಬಿ.ಶರತ್, ಪೆÇಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಹೇಮಂತ್ ಕುಮಾರ್, ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಶ್ಯಂತ್, ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.