ಎಸಿಬಿ ಬಲೆಗೆ ಬಿದ್ದ ಸೂಪರ್ ವೈಸರ್

ಚಾಮರಾಜನಗರ: ಪೋಡಿ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಸೂಪರ್ ವೈಸರ್‍ವೊಬ್ಬರು ಬುಧವಾರ ಎಸಿಬಿ ಬಲೆಗೆ ಬಿದಿದ್ದಾರೆ.
ಚಾಮರಾಜ ನಗರ ತಾಲ್ಲೂಕು ಕಚೇರಿ ಸರ್ವೇ ಇಲಾಖೆ ಸೂಪರ್ ವೈಸರ್ ನಾಗರಾಜು ಎಸಿಬಿ ಬಲೆಗೆ ಬಿದ್ದವರಾಗಿದ್ದಾರೆ.
ನಾಗರಾಜು ಅವರು ಮಹೇಶ ಎಂಬುವರಿಂದ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಚಾಮರಾಜ ನಗರ ತಾಲ್ಲೂಕಿನ ಚಿಕ್ಕಮೋಳೆ ಗ್ರಾಮದ ಮಹೇಶ್ ಅವರಿಗೆ ಪೋಡಿ ಮಾಡಿಕೊಡಲು ನಾಗರಾಜು 2 ಸಾವಿರ ರೂ. ಲಂಚ ನೀಡುವಂತೆ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಮಹೇಶ್ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.
ನಾಗರಾಜು ಬುಧವಾರ ಮಹೇಶ್ ಅವರಿಂದ 2 ಸಾವಿರ ರೂ. ಲಂಚದ ಹಣ ಸ್ವೀಕರಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ದಕ್ಷಿಣ ವಲಯ ಮೈಸೂರಿನ ಪೊಲೀಸ್ ಅಧೀಕ್ಷಕರಾದ ಡಾ. ಸುಮನ್ ರವರ ಮಾರ್ಗದರ್ಶನದಲ್ಲಿ ಚಾಮರಾಜ ನಗರ ಜಿಲ್ಲಾ ಎಸಿಬಿ ಉಪಾಧೀಕ್ಷಕ ಸದಾನಂದ ತಿಪ್ಪಣ್ಣವರ್, ಪೊಲೀಸ್ ನಿರೀಕ್ಷಕ ಕಿರಣ್ ಕುಮಾರ್, ದೀಪಕ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಾಗರಾಜ್ ಅವರನ್ನು ಬಂಧಿಸಿದ್ದಾರೆ.