-ಜಿ.ಆರ್.ಸತ್ಯಲಿಂಗರಾಜು
ಪ್ರತಿಯೊಬ್ಬನೊಳಗೂ ಅಭಿನಯ ಇದ್ದೇಇರುತ್ತೆ. ಅದನ್ನೇ ಬೆಳೆಸಿಕೊಂಡರೆ ಕಲಾವಿದನಾಗಿತ್ತಾನೆ.
ಸಿನಿಮಾದ ಶ್ರೇಷ್ಠ ಕಲಾವಿದ ಎನಿಸಿಕೊಳ್ಳಲು ಬಹುಮುಖ್ಯ ಅವನಿಗೆ ಗೊತ್ತಿರಲೇಬೇಕಾದ್ದು ಪಂಚ ತಂತ್ರ ಅಥವಾ ಸೂತ್ರಗಳು. ಅವೆಂದರೆ
೧. ಸಿನಿಮಾ ಹೊರತಾಗಿಸಿ ಉಳಿದೆಲ್ಲ ಮನರಂಜನಾ ಕಾರ್ಯಕ್ರಮಗಳಲ್ಲಿ ಕಲಾವಿದ-ನೋಡುಗ ಎದುರೆದುರೇ ಇರುತ್ತಾರೆ. ಸಿನಿಮಾದಲ್ಲು ಇವರಿಬ್ಬರೂ ಪ್ರತ್ಯೇಕ. ಇದರಿಂದಾಗಿ ಸಿನಿಮಾದಲ್ಲಿ ಅಭಿನಯ ಮಾಡುವಾಗ ಎದುರಲ್ಲೇ ಪ್ರೇಕ್ಷಕ ಕೂತು ನೋಡುತ್ತಿರುವಂಥ ಪ್ರತಿಬಿಂಬ ತನ್ನ ಮನದೊಳಗೇ ಕಲ್ಪಿಸಿಕೊಂಡಿರಬೇಕು. ತನ್ನ ಮತ್ತು ತನ್ನ ಸಹಪಾತ್ರಧಾರನ ಪಾತ್ರದ ಜತೆ ಸಂಬಂಧ ಪಟ್ಟಂತೆಯೇ ನಟಿಸಬೇಕು. ಈ ಎರಡನೇ ಮಾರ್ಗ ಅನುಸರಿಸುವಾಗ, ನಟ ತನ್ನ ವ್ಯಕ್ತಿತ್ವ ತಾತ್ಕಾಲಿಕವಾಗಿ ಬರೆಯಬೇಕು, ಎದುರಿಗೆ ಕ್ಯಾಮರಾ ಇದೆ ಎಂಬುದನ್ನ ಮರೆಯಬೇಕು. ಪಾತ್ರವೇ ನಾನು ಎಂದು ಸಹಜವಾಗಿ ನಟಿಸಬೇಕು. ನನ್ನ ಮತ್ತು ಪ್ರೇಕ್ಷಕ ನಡುವೆ ಕ್ಯಾಮರಾ ಲೆನ್ಸ್, ಪರದೆ ಅಡಚಣೆಗಳಿವೆ. ಅದನ್ನ ದಾಟಿ ಪ್ರೇಕ್ಷಕರನ್ನ ತಲುಪುತ್ತೇನೆ ಎಂಬ ಹುಮ್ಮಸ್ಸು ನಟನಿಗೆ ಇರಬೇಕು.
೨. ವೇದಿಕೆ ಮೇಲಿನ ಇತರೆ ಕಾರ್ಯಗಳಲ್ಲಿ ಕಲಾವಿದನನ್ನ ಪ್ರೇಕ್ಷಕ ನಿರ್ದಿಷ್ಟ ಸ್ಥಳದಿಂದ ನೋಡುತ್ತಾನೆ. ಆದರೆ ಸಿನಿಮಾದಲ್ಲಿನಟನ ಅಭಿನಯವನ್ನ ಕ್ಯಾಮರಾ ಎಲ್ಲ ಕೋನದಿಂದಲೂ ತೋರಿಸುತ್ತೆ. ಹೀಗಾಗಿ ನಟ, ಪ್ರೇಕ್ಷಕನಿಂದ ಬಚ್ಚಿಟ್ಟುಕೊಂಡು ಇರಲಾಗಲ್ಲ.
ದೂರ, ಮಧ್ಯಮ,ಹತ್ತಿರ ಹೀಗೆ ಎಲ್ಲಾ ಕೋನದಿಂದಲೂ ಕ್ಯಾಮರಾ ನಟನನ್ನ ಸೆರೆ ಹಿಡಿವುದರಿಂದ ಸಣ್ಣ ತಪ್ಪು ಕೂಡ, ಇಡೀ ಪಾತ್ರವನ್ನೇ ಅಂದಗೆಡಿಸಿಬಿಡಬಹುದು.
ನಟನನ್ನ ಯುವಕ, ವೃದ್ಧ, ದಡ್ಡ, ಪ್ರತಿಭಾವಂತ ಹೀಗೇ ನಾನಾ ಪಾತ್ರದಲ್ಲು ನನ್ನನ್ನ ಕ್ಯಾಮರಾ ತೋರಿಸುತ್ತೆ ಎಂಬ ಅರಿವು, ಕಣ್ಣೀರು ಕೂಡ ಪರದೆ ಮೇಲೆ ದೊಡ್ಡದಾಗಿ ಕಾಣುತ್ತೆ ಎಂಬ ಜ್ಞಾನ ಇರಿಸಿಕೊಂಡೇ ಕ್ಯಾಮರಾ ಮುಂದೆ ನಿಲ್ಲಬೇಕು.
೩. ಸಿನಿಮಾ ಅನುಕ್ರಮವಾಗಿ ಚಿತ್ರಣ ಆಗಲ್ಲ. ಹೀಗಾಗಿ ನಟ ತನ್ನ ಪಾತ್ರದಲ್ಲಿ ತನ್ಮಯನಾಗಿದ್ದಾಗಲೇ ಸರಣಿ ಇಲ್ಲದ ಕಥೆ ಚಿತ್ರಿಸಿದರೂ, ಇವನ ಅಭಿನಯಕ್ಕೆ ಚ್ಯುತಿ ಬರಲ್ಲ. ಯಾವಾಗ, ಎಲ್ಲಿ, ಎಷ್ಟೇ ದಿನದ ನಂತರ ಚಿತ್ರಿಸಿದರೂ, ನಟನೆ ಜೀವಂತಿಕೆ ಕಳೆದುಕೊಳ್ಳಬಾರದು. ಇದಕ್ಕಾಗಿ ಪಾತ್ರದಲ್ಲಿ ತನ್ಮಯನಾಗುವುದು ಅತ್ಯಗತ್ಯ.