ಆಧಾರ ರಹಿತ ಆರೋಪ ಮಾಡುವ ಕಾಂಗ್ರೆಸ್ ಬೇಜಾವಾಬ್ದಾರಿ ಪಕ್ಷ -ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಆಧಾರ ರಹಿತ ಆರೋಪ ಮಾಡುವ ಕಾಂಗ್ರೆಸ್ ಬೇಜಾವಾಬ್ದಾರಿ ಪಕ್ಷ ಎಂದು ಮಾಜಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಜಗದೀಶ್ ಶೆಟ್ಟರ್ ಅವರು ಗುರುವಾರ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಬಿಟ್ ಕ್ವಾಯಿನ್ ವಿಚಾರದಲ್ಲಿ ಬಿಜೆಪಿ ನಾಯಕರ ಮೇಲೆ ಕಾಂಗ್ರೆಸ್ ಆರೋಪ ಕುರಿತು ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ರಾಜಕಾರಣ ಸಲುವಾಗಿ ಈ ರೀತಿ ಆರೋಪ ಸರಿಯಲ್ಲ ಎಂದರು.

ಸರಿಯಾದ ದಾಖಲೆಗಳಿದ್ದರೆ ಬಿಡುಗಡೆ ಮಾಡಿ. ಯಾರೋ ಮಾಡ್ತಾರೆ ಅನ್ನೋ ಸಲುವಾಗಿ, ಬೇಜಾವ್ದಾರಿ ಹೇಳಿಕೆ ನೀಡೋದು ಸರಿಯಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಈ ರೀತಿ ಆರೋಪ ಮಾಡೋದು, ರಾಜಕೀಯ ಪಕ್ಷಕ್ಕೆ ಒಳ್ಳೆಯದಲ್ಲ. ಜಾರ್ಜ್ ಶೀಟ್ ಹಾಕಿರೋದರಲ್ಲಿ ಕಾಂಗ್ರೆಸ್ ನಾಯಕರ ಹೆಸರೇ ಬಂದಿದೆ. ಅದೇಕ್ಕೇನು ನೀವು ಉತ್ತರ ಕೊಡ್ತೀರಿ ಎಂದು ಕೈ ನಾಯಕರನ್ನು ಶೆಟ್ಟರ್ ಪ್ರಶ್ನೆ ಮಾಡಿದರು.

ಬಿಜೆಪಿ ನಾಯಕರ ಮೇಲೆ ನಿರಾಧಾರವಾಗಿ ಆರೋಪ ಮಾಡೋದು ತಪ್ಪು. ಅದಕ್ಕೇನಾದರು ಸಾಕ್ಷಿ ಪುರಾವೆಗಳಿದ್ದರೆ ಹಾಜರು ಮಾಡಿ ತನಿಖೆ ಆಗಲಿ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಗದೀಶ್ ಶೆಟ್ಟರ್, ಬಿಟ್ ಕ್ವಾಯಿನ್ ಸಲುವಾಗಿ ಸಿಎಂ ದೆಹಲಿಗೆ ಹೋಗಿಲ್ಲ. ಹಲವು ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡಲು ದೆಹಲಿಗೆ ಹೋಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದರು.