ಬೆಂಗಳೂರು: ನಟ ಹಾಗೂ ಸುಮಲತಾ-ಅಂಬಿ ಪುತ್ರ ಅಭಿಷೇಕ್ ಅಂಬರೀಷ್ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಫ್ಯಾಷನ್ ಲೋಕದಲ್ಲಿ ಹೆಸರು ಮಾಡಿರುವ ಅವಿವಾ ಬಿದ್ದಪ್ಪ ಅವರೊಂದಿಗೆ ಭಾನುವಾರ ನಿಶ್ಚಿತಾರ್ಥ ಖಾಸಗಿ ಹೊಟೇಲ್ನಲ್ಲಿ ನೆರವೇರಿದೆ.
ಕೆಲವು ದಿನಗಳ ಹಿಂದೆ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದ್ದಪ್ಪ ಅವರು ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು.
ನಗರದ ಪ್ರತಿಷ್ಠಿತ ಫೋರ್ ಸೀಸನ್ಸ್ ಹೊಟೇಲ್ನಲ್ಲಿ ಸುಮಲತಾ ಅಂಬರೀಷ್ ಹಾಗೂ ಫ್ಯಾಷನ್ ಲೋಕದ ದಿಗ್ಗಜ ಪ್ರಸಾದ್ ಬಿದ್ದಪ್ಪ ಅವರ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿತು.
ಸಚಿವ ಅಶ್ವತ್ಥ ನಾರಾಯಣ, ನಿರ್ದೇಶಕ ಮಹೇಶ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಕೆಲ ನಿರ್ಮಾಪಕರು, ನಿರ್ದೇಶಕರು, ಆಪ್ತೇಷ್ಟರು ಮಾತ್ರ ಪಾಲ್ಗೊಂಡಿದ್ದರು.