ಹಾವೇರಿ: ಆಂತರಿಕ ಭದ್ರತಾ ವಿಭಾಗದ ಹಾವೇರಿ-ಗದಗ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿರಹಟ್ಟಿ ಠಾಣಾ ವ್ಯಾಪ್ತಿಯ ಪರಸಾಪೂರ ಗ್ರಾಮದ ಸಮೀಪ ರೂ. 22600 ಮೌಲ್ಯದ ಸ್ಫೋಟಕ ವಸ್ತುಗಳನ್ನು ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಡಿ.ವೈ.ಎಸ್.ಪಿ. ಅನಿಲಕುಮಾರ ಎಸ್.ಭೂಮರಡ್ಡಿ ಅವರು ತಿಳಿಸಿದ್ದಾರೆ.
ಡಿ. 23ರ ಸಂಜೆ ಪರಸಾಪೂರ ಗ್ರಾಮದ ಸಮೀಪದ ವಿಕ್ರಮ ಬಳ್ಳಾರಿ ಅವರ ಕಲ್ಲಿನ ಕ್ವಾರಿಗೆ ಹೋಗುವ ಕಚ್ಚಾ ರಸ್ತೆಯಲ್ಲಿ ಪೆÇಲೀಸ್ ವಾಹನ ಕಂಡು ರಟ್ಟಿನ ಬಾಕ್ಸ್ ಬಿಟ್ಟು ನಾಲ್ಕು ಜನ ಓಡಿ ಹೋಗಿದ್ದಾರೆ.
ಸ್ಥಳಕ್ಕೆ ಧಾವಿಸಿ ರಟ್ಟಿನ ಬಾಕ್ಸ್ ತೆರೆದು ನೋಡಿದಾಗ ಸ್ಪೋಟಕಕ್ಕೆ ಬಳಸುವ Explosive (CLASS-2) ldeal power 125 g x 25mm ಅಂತಾ ಇರುವ 575 ದ್ರವ ಟ್ಯೂಬ್ ಹಾಗೂ 575ED (Explosive Device) Wires (ಬಿಳಿಬಣ್ಣದ) ವಾಯರ್ ಜೋಡಣೆ ಹಾಗೂ ಐಡಿಯಲ್ ಕಂಪನಿಯ 55 ಕೇಬಲ್ ಕನೆಕ್ಟರ್ ಗಳು ಕಂಡುಬಂದಿವೆ.
ಈ ಕುರಿತು ಸ್ಥಳೀಯ ವ್ಯಕ್ತಿಯೊಬರನ್ನು ವಿಚಾರಿಸಲಾಗಿ ಸಮೀಪದಲ್ಲಿ ವಿಕ್ರಮ ಬಳ್ಳಾರಿ ಅವರ ಕಲ್ಲಿನ ಕ್ವಾರಿ ಇದ್ದು, ಸಂಶಿ ಗ್ರಾಮದ ಸತೀಶ ಮುಂಡ್ರಾ ಎಂಬ ವ್ಯಕ್ತಿ ಇಲ್ಲಿಗೆ ಆಗಾಗ್ಗೆ ಬಂದು ಬ್ಲಾಸ್ಟ್ ಮಾಡಿ ಹೋಗುತ್ತಿರುವುದಾಗಿ ತಿಳಿಸಿದ್ದಾರೆ.
ಸಿಪಿಸಿ ಎಸ್.ಎಸ್.ಕುರಿ ಅವರು ಈ ಬಗೆ ಪರಿಶೀಲನೆ ನಡೆಸಿ ಸದರಿ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದು ಶಿರಹಟ್ಟಿ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಆಂತರಿಕ ಭದ್ರತಾ ವಿಭಾಗದ ಹಾವೇರಿ-ಗದಗ ಘಟಕದ ಪೆÇಲೀಸ್ ನಿರೀಕ್ಷಕ ಈರಯ್ಯ ಮಠಪತಿ, ಸಿಬ್ಬಂದಿಗಳಾದ ಅನಿಲ್‍ಕುಮಾರ ಬಿಜಾಪುರ, ಎಂ.ಎಚ್.ಗುಡಗೂರ, ಸುನೀಲ್ ಹುಚ್ಚಣ್ಣನವರ, ಶಿವಮೂರ್ತಿ ಕುರಿ, ದುರ್ಗಪ್ಪ ಕೊಡ್ಲೇರ ಭಾಗವಹಿಸಿದ್ದರು.