ಮೈಸೂರು: ಅಪರಾಧಿಗಳಿಗೆ ದರೋಡೆಕೋರರಿಗೆ ಕ್ರಿಮಿನಲ್ ಗಳಿಗೆ ಪೊಲೀಸರು ಟೆರರ್ ಆಗಿರಬೇಕು ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ ಹೇಳಿದರು.
ಮೈಸೂರಿನ ಜ್ಯೋತಿ ನಗರದಲ್ಲಿನ ಪೆÇಲೀಸ್ ತರಬೇತಿ ಶಾಲೆಯಲ್ಲಿ ಮಂಗಳವಾರ 6ನೇ ತಂಡದ ಮಹಿಳಾ ಪೆÇಲೀಸ್ ಕಾನ್ಸಟೇಬಲ್ ಪ್ರಶಿಕ್ಷಣಾರ್ಥಿಗಳ ಆಕರ್ಷಕ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಗೃಹ ಸಚಿವರು ಮಾತನಾಡಿದರು.
ಪೆÇಲೀಸರ ಬಗ್ಗೆ ಜನರಿಗೆ ಭಯ ಇರಬಾರದು. ಅಪರಾಧಿಗಳಿಗೆ ದರೋಡೆಕೋರರಿಗೆ ಕ್ರಿಮಿನಲ್ ಗಳಿಗೆ ಪೊಲೀಸರು ಟೆರರ್ ಆಗಿರಬೇಕು ಎಂದು ಅವರು ಹೇಳಿದರು.
ಜನರ ಮನಸ್ಸಿನಲ್ಲಿ ಪೆÇಲೀಸ್ ಎನ್ನುವ ಭಯ ಇರಬಾರದು. ಸಾಮಾನ್ಯ ಜನರಿಗೆ ಪೆÇಲೀಸ್ ಎಂದರೆ ನಮ್ಮ ರಕ್ಷಕರು ಸ್ನೇಹಿತರು ಎನ್ನುವ ಭಾವನೆ ಇರಬೇಕು. ಅಪರಾಧಿಗಳಿಗೆ, ದರೋಡೆಕೋರರಿಗೆ, ಕಳ್ಳರಿಗೆ ಪೊಲೀಸರ ಭಯ ಇರಬೇಕೇ ಹೊರತು ಸಾಮಾನ್ಯಜನರಿಗಲ್ಲ. ಠಾಣೆಗೆ ಬಂದ ಸಾಮಾನ್ಯ ಜನರನ್ನು ಗೌರವಿಸಬೇಕು. ಸಾಮಾನ್ಯ ನಾಗರಿಕ ಸ್ನೇಹಿಯಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಜನರಲ್ಲಿ ಆತ್ಮವಿಶ್ವಾಸ ತುಂಬಲು ಪೆÇಲೀಸರಿಗೆ ಹೃದಯವಂತಿಕೆ ಬೇಕೇ ಹೊರತು ಕಠಿಣ ನಿರ್ಧಾರಗಳಲ್ಲ ಎಂದು ಗೃಹ ಸಚಿವರು ತಿಳಿಸಿದರು.
ರಾಜ್ಯದಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಪೆÇಲೀಸರ ವಿರುದ್ಧ ದೂರು ನೀಡುವ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.
ಪೆÇಲೀಸರ ಕಡೆಯಿಂದಲೂ ಇತ್ತೀಚೆಗೆ ಅಪರಾಧ ಹೆಚ್ಚುತ್ತಿವೆ. ಹಾಗಾಗಿ ಪೆÇಲೀಸರ ವಿರುದ್ಧವೂ ಎಸ್ಪಿ, ಡಿಜಿ ಕಚೇರಿಗಳಲ್ಲಿ ದೂರವಾಣಿ ಮೂಲಕ ದೂರು ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಪೆÇಲೀಸರಿಂದ ಅಪರಾಧಕ್ಕೊಳಗಾದವರು ದೂರು ನೀಡಬೇಕು. ಅದಕ್ಕಾಗಿ ಅಗತ್ಯ ವಾತಾವರಣ ನಿರ್ಮಾಣ ಮಾಡಲು ವ್ಯವಸ್ಥೆ ಮಾಡುತ್ತೇವೆ ಎಂದವರು ಹೇಳಿದರು.
ವೈರಿ ರಾಷ್ಟ್ರಗಳಿಂದ ಬರುವ ಶತ್ರುಗಳನ್ನು ದಮನ ಮಾಡಲು ನಮ್ಮ ಮಿಲಿಟರಿ ಪಡೆ ಸನ್ನದ್ಧವಾಗಿದೆ. ಜಗತ್ತಿನಲ್ಲಿ ಅತ್ಯಂತ ದೊಡ್ಡ ಮಿಲಿಟರಿ ಪಡೆ ಇರುವುದು ಭಾರತದಲ್ಲಿ. 133 ಕೋಟಿ ಜನಸಂಖ್ಯೆ ಇರತಕ್ಕ ಈ ನಮ್ಮ ದೇಶದಲ್ಲಿ ವಿವಿಧ ಧರ್ಮ, ಜಾತಿ, ಮತ, ಪಂಥ ಭಾಷೆ ಇವೆಲ್ಲವೂ ಇರತಕ್ಕ ದೇಶದ ಆಂತರಿಕ ರಕ್ಷಣೆಯ ಸವಾಲನ್ನು ಮಿಲಿಟರಿಯವರು ಮಾಡಲು ಸಾಧ್ಯವಿಲ್ಲ. ನಮ್ಮ ದೇಶದ ಪೆÇಲೀಸ್ ಪಡೆ ಸವಾಲಾಗಿ ಸ್ವೀಕರಿಸಿದೆ ಎಂದವರು ತಿಳಿಸಿದರು.
ದೇಶದ ಆಂತರಿಕ ಭದ್ರತೆಯನ್ನು ಗಟ್ಟಿಗೊಳಿಸಿ ದೇಶದ ನಾಗರಿಕರ ಮಾನ, ಪ್ರಾಣ ಸ್ವತ್ತನ್ನು ಕಾಪಾಡಿ, ಶಾಂತಿ ಸುವ್ಯವಸ್ಥೆ ತರುವ ಬಹಳ ದೊಡ್ಡ ಹೊಣೆಗಾರಿಕೆ ಪೆÇಲೀಸ್ ಇಲಾಖೆ ನಿರ್ವಹಿಸುತ್ತಿದೆ ಎಂದು ಗೃಹ ಸಚಿವರು ಹೇಳಿದರು.
ಪೆÇಲೀಸರು ಅಂದ ತಕ್ಷಣ ಪುರುಷರು ಅನ್ನುವ ಪರಿಕಲ್ಪನೆ ನಿರ್ಮಾಣವಾಗುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಮಹಿಳಾ ಸಿಬ್ಬಂದಿಯನ್ನು ಪೆÇಲೀಸ್ ಪಡೆಯಲ್ಲಿ ನೇಮಕ ಮಾಡಿಕೊಳ್ಳುವ ನಿಯಮ ತಂದಿದೆ. 100ಕ್ಕೆ 25ರಷ್ಟು ಮಹಿಳೆಯರು ಪೆÇಲೀಸ್ ಪಡೆಯಲ್ಲಿ ಇರಬೇಕು. ರಾಜ್ಯದಲ್ಲಿ ಶೇ. 10ರಷ್ಟು ಮಹಿಳಾ ಪೆÇಲೀಸ್ ಸಿಬ್ಬಂದಿ ಇದ್ದಾರೆ. ಕ್ರಮೇಣ ಇದನ್ನು ಹೆಚ್ಚಿಸತಕ್ಕಂತಹ ಕಾರ್ಯ ನಡೆದಿದೆ ಎಂದರು.
ಒಂದು ಕಾಲದಲ್ಲಿ ಹೆಬ್ಬೆಟ್ಟು ಒತ್ತುತ್ತಿದ್ದವರಿಗಿಂತ ಸಹಿ ಹಾಕುವವರಿಗೆ ಪೆÇಲೀಸ್ ಹುದ್ದೆ ನೀಡುತ್ತಿದ್ದರು. ಸ್ವಾತಂತ್ರ್ಯ ಆರಂಭ ದಿನದಲ್ಲಿ ಬ್ರಿಟಿಷ್ ಕಾಲದಲ್ಲಿ ಈ ಪದ್ಧತಿ ಇತ್ತು ಎಂದ ಗೃಹ ಸಚಿವರು, ಪೆÇಲೀಸ್ ಕಾನ್ಸಟೇಬಲ್ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಪಿಯುಸಿ ಇದ್ದರೆ ಸಾಕು. ಆದರೆ ಇಲ್ಲಿ ಎಂಎ, ಎಂಕಾಂ, ಎಂಎಸ್ಸಿ, ಎಂಎ ಬಿಇಡಿ, ಎಂಎಸ್ ಸಿ ಬಿಇಡಿ , ಬಿಎ, ಬಿಕಾಂ, ಬಿ ಇ, ಎಲ್ ಎಲ್ ಬಿ ಓದಿದವರು ಇದ್ದಾರೆಂದರು.
ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶೇ. 30ರಷ್ಟು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳಾಗಿವೆ. ಅನೇಕ ಸಂದರ್ಭಗಳಲ್ಲಿ ಮಹಿಳೆ ದೂರು ನೀಡಲು ಬಂದಾಗ ಮಹಿಳಾ ಸಿಬ್ಬಂದಿ ಇರಬೇಕು. ಎಲ್ಲ ಪೆÇಲೀಸ್ ಠಾಣೆಯಲ್ಲೂ ಕನಿಷ್ಠ ಮೂರು ಮಂದಿ ಮಹಿಳಾ ಕಾನ್ಸಟೇಬಲ್ ಇರಬೇಕು. ಹಾಗಾಗಿ ಮಹಿಳಾ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. 36 ಮಹಿಳಾ ಪೆÇಲೀಸ್ ಠಾಣೆಗಳನ್ನು ನಿರ್ಮಾಣ ಮಾಡಿದ್ದೇವೆ. ಜಿಲ್ಲೆಗೊಂದು ಮಹಿಳಾ ಪೆÇಲೀಸ್ ಠಾಣೆ ಇದೆ ಎಂದರು.
ಮಹಿಳೆಯರ ಸಬಲೀಕರಣಕ್ಕೋಸ್ಕರ ಅನೇಕ ಕೆಲಸ ಮಾಡುತ್ತಿದ್ದೇವೆ. ಯಾರೋ ಕಿರಾತಕ ಮನಸ್ಸಿನ ವ್ಯಕ್ತಿಗಳಿರುತ್ತಾರೆ. ದೌರ್ಜನ್ಯ ನಡೆಯುತ್ತಿದೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಇಂತವರು ಇರುವವರೆಗೆ ಹೆಣ್ಣು ಮಕ್ಕಳನ್ನು ಕಾಪಾಡುವಂತಹ ಹೊಣೆಗಾರಿಕೆ ಪೆÇಲೀಸ್ ಮೇಲೆ ಇದೆ ಎಂದು ಗೃಹ ಸಚಿವರು ತಿಳಿಸಿದರು
ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಲತಾ ಎಂ ಮಹಿಳಾ ಪಿಸಿ ಚಾಮರಾಜನಗರ ಜಿಲ್ಲೆ, ಒಳಾಂಗಣ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನವನ್ನು ಲತಾ ಎಂ ಮಹಿಳಾ ಪಿಸಿ ಚಾಮರಾಜನಗರ ಜಿಲ್ಲೆ, ದ್ವಿತೀಯ ಸ್ಥಾನವನ್ನು ಕಾವೇರಿ ಬಿ. ಮಹಿಳಾ ಪಿಸಿ ಚಾಮರಾಜನಗರ ಜಿಲ್ಲೆ, ತೃತೀಯ ಸ್ಥಾನವನ್ನು ಅಶ್ವಿನಿ ಕೆ ಮಹಿಳಾ ಪಿಸಿ ಮೈಸೂರು ಜಿಲ್ಲೆ ಇವರುಗಳು ಪಡೆದರು.
ಹೊರಾಂಗಣದಲ್ಲಿ ಪ್ರಥಮ ಸ್ಥಾನವನ್ನು ರೇಖಾ ಡಿ ಮಹಿಳಾ ಪಿಸಿ ಕೊಡಗು ಜಿಲ್ಲೆ, ದ್ವಿತೀಯ ಸ್ಥಾನವನ್ನು ಶಶಿಕಲಾ ಮಹಿಳಾ ಪಿಸಿ ತುಮಕೂರು ಜಿಲ್ಲೆ, ತೃತೀಯ ಸ್ಥಾನವನ್ನು ಮೇಘನ ಎಂ.ಪಿ ಮಹಿಳಾ ಪಿಸಿ ಕೊಡಗು ಜಿಲ್ಲೆ ಪಡೆದರು.
ಫೈರಿಂಗ್ ನಲ್ಲಿ ಸುಜಾತಾ ಎಸ್.ಬಿರಾದಾರ ಮಹಿಳಾ ಪಿಸಿ ರಾಯಚೂರು, ಚಂದ್ರಕಲಾ ಬಿರಾದಾರ ಮಹಿಳಾ ಪಿಸಿ ಮಂಗಳೂರು ನಗರ, ತೃತೀಯ ಸ್ಥಾನವನ್ನು ಚಿತ್ರ ಡಿ.ಜಿ.ಮಹಿಳಾ ಪಿಸಿ ಮಂಗಳೂರು ನಗರ ಇವರುಗಳು ಪಡೆದರು.
ತರಬೇತಿಯಲ್ಲಿ 242 ಪ್ರಶಿಕ್ಷಣಾರ್ಥಿಗಳು ಬುನಾದಿ ತರಬೇತಿ ಪಡೆದರು.
ಪ್ರಶಿಕ್ಷಣಾರ್ಥಿಗಳಿಗೆ ಪೆÇೀಲೀಸ್ ತರಬೇತಿ ಶಾಲೆ ಪ್ರಾಂಶುಪಾಲೆ ಡಾ.ಧರಣಿದೇವಿ ಮಾಲಗತ್ತಿ ಅವರು ಪ್ರತಿಜ್ಞಾವಿಧಿ ಬೋಧನೆ ಮಾಡಿದರು. ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕ ಡಾ.ಹರಿಶೇಖರನ್ ಅವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪೆÇಲೀಸ್ ಅಕಾಡೆಮಿ ನಿರ್ದೇಶಕ ವಿಫುಲ್ ಕುಮಾರ್, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಎಸ್ಪಿ ಆರ್.ಚೇತನ್ ಸೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.