ಅಪಘಾತದಲ್ಲಿ ಸತ್ತವನ ಬಳಿಯಿದ್ದ ಉಂಗುರ ಮಾಯ?

ವರದಿ:ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ಸತ್ತವನ ಬಳಿಯಿದ್ದ ಚಿನ್ನದ ಉಂಗುರ ಎಲ್ಲಿ ಮಾಯವಾಯಿತು. ಯಾರು ಕದ್ದೋಯ್ದರು? ಎಂಬ ಪ್ರಶ್ನೆ ಕಾಡುತ್ತಿದೆ.
ಮೃತಪಟ್ಟವರ ದೇಹದಲ್ಲಿರೋ ಪದಾರ್ಥಗಳನ್ನು ಅಪಹರಿಸಿಕೊಂಡು ಹೋಗುವ ಜನ ಇದ್ದಾರೆ ಎಂಬ ಮಾಹಿತಿಯ ನ್ಯೂಸ್ ಇದು.
15-5-2020ರಂದು ಬರುತ್ತಿದ್ದ ಟಿಪ್ಪರ್ ನ್ನ ಪೆÇಲೀಸರು ತಡೆಯಲು ಯತ್ನಿಸಿದಾಗ ಚಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಹಿಂದೆ ಬಂದ ಲಾರಿ ಡಿಕ್ಕಿ ಹೊಡೆಯಿತು.
ಸ್ಥಳದಲ್ಲೆ ಆತ ಕೂಡ ಮೃತನಾದ. ಇದು ವ್ಯಾಪಕವಾಗಿ ಪೆÇಲೀಸ್ ಇಲಾಖೆಯಲ್ಲಿ ವಿಚಾರಣೆಯೆ ನಡೆಯಿತು. ಕಾರಣ ಅದರಲ್ಲಿ ಮರಳು ಸಾಗಾಣಿಕೆ ನಡೆಯುತ್ತಿತ್ತು.
ಕೊನೆಗೆ ಪೊಲೀಸ್ ಇಲಾಖೆಯ ಮೂವರ ತಲೆದಂಡ ಕೂಡ ಆಗಿದೆ.
ಚಾಮರಾಜನಗರ ಗ್ರಾಮಾಂತರ ಇನ್ಸ್ ಪೆಕ್ಟರ್ ಮಂಜು, ಪೂ. ಗ್ರಾಮಾಂತರ ಠಾಣೆ ಸಬ್ ಇನ್ಸ್ ಪೆಕ್ಟರ್ ಸುನೀಲ್, ಮುಖ್ಯ ಪೇದೆ ನಾಗನಾಯ್ಕ ಅವರನ್ನ ದಕ್ಷಿಣ ವಲಯ ಪೆÇಲೀಸ್ ಮಹಾನಿರ್ದೇಶಕರಾದ ವಿಪುಲ್ ಕುಮಾರ್ ಅವರು ವಿಚಾರಣೆ ನಡೆಸಿ ಅಮಾನತು ಮಾಡಿದ್ದರು.
ಮೃತ ನವೀನ್ ಇತ್ತೀಚೆಗಷ್ಟೆ ವಿವಾಹ ನಿಶ್ಚಿತಾರ್ಥವಾಗಿದ್ದ ಹಿನ್ನಲೆಯಲ್ಲಿ 10ಕ್ಕೂ ಹೆಚ್ಚು ಗ್ರಾಂ ತೂಕದ ಚಿನ್ನದ ಉಂಗುರ ಆತನ ಕೈ ಬೆರಳಿನಲ್ಲಿ ಇತ್ತು. ಆದರೆ ಎಲ್ಲೂ ಕೂಡ ಅದರ ಪ್ರಸ್ತಾಪವೇ ಇಲ್ಲ. ಹಾಗೂ ಅಂದು ವಿಚಾರಣೆಯ ಅಪರಿಪೂರ್ಣತೆ ಅರಿತು ಐಜಿಪಿ ಅವರು ಮತ್ತಷ್ಟು ತನಿಖೆ ಚುರುಕುಗೊಳಿಸಿದರು.
ಈಗ ಚಾಮರಾಜನಗರ ಕೊಳ್ಳೇಗಾಲ ವಿಭಾಗದ ಡಿವೈಸ್ಪಿ ನವೀನ್ ಕುಮಾರ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು ಮತ್ತಷ್ಟು ಪೊಲೀಸರು ಅಮಾನತು ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಮುಖವಾಗಿ ಮರಳು ಸಾಗಾಣಿಕೆ ಅಪಘಾತವಾದಾಗ ಸಾಕ್ಷಿ ಸಿಕ್ಕಿದರೂ ಎಮ್. ಸ್ಯಾಂಡ್ ಮರಳು ಎಂದು ಪ್ರಕರಣ ತಿರುಚಲು ಪ್ರಮುಖ ಮಹಾಶಯರು ಯತ್ನಿಸಿದರೂ ಕೆಲವೊಂದು ತಾತ್ವಿಕ ಹೇಳಿಕೆಗಳು ಗೊಂದಲ ಮೂಡಿಸಿದೆ.
ಆದರೂ ಅಂಗೈ ಹುಣ್ಣಿಗೆ ಸಾಕ್ಷಿ ಬೇಕೆ ಎಂಬಂತೆ ಮರಳ ಸಾಗಾಣಿಕೆ ನಡೆಯುತ್ತಿದೆ ಎಂದು ಹೇಳಲು ಸಾಕಷ್ಟು ಸಾಕ್ಷಿ ಸಿಕ್ಕರೂ ಇಲಾಖೆಯ ಕೆಲವರು ಅಕ್ರಮದಾರರಿಗೆ ಸಹಾಯಕ್ಕೆ ನಿಂತಿದ್ದರಿಂದ ವಿಚಾರಣೆ ತಡವಾಗುತ್ತಿದೆ ಎನ್ನಲಾಗಿದೆ.
ಅಪಘಾತಕ್ಕೆ ಕಾರಣ ಮತ್ತು ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿತ್ತು. ಅದು ಎಲ್ಲಿಂದ ನಡೆಯುತ್ತಿತ್ತು. ಸತ್ತವನ ಕೈಯಲಿದ್ದ ಉಂಗುರ ಏನಾಯಿತು ಎಂಬ ಮತ್ತಷ್ಟು ವಿಚಾರಣೆ ನಡೆಸಿ ಶಿಕ್ಷೆಗೆ ಗುರಿಪಡಿಸುವುದರ ಜೊತೆಗೆ ಹಿಂದಿನ ಎಸ್ಪಿ ಆನಂದ್ ಕುಮಾರ್ ಅವರ ಅವಧಿಯಲ್ಲಿ ಹಗರಣಗಳೇನಾದರೂ ನಡೆದಿದೆಯೆ? ಎಂಬುದನ್ನ ಐಜಿಪಿ ಅವರು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಬೇಕಾಗಿದೆ.