ಮೈಸೂರು:ಮೂವರು ಮಕ್ಕಳಿರುವ ತಾಯಿಯೊಬ್ಬಳು 17 ವರ್ಷದ ಬಾಲಕನನ್ನು ವಿವಾಹವಾಗಲು ಪಟ್ಟು ಹಿಡಿದಅಸಹ್ಯಕರ ಘಟನೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಮಹಾತಾಯಿ ಆನ್ಲೈನ್ನಲ್ಲಿ ಬಾಲಕನನ್ನು ಪರಿಚಯಿಸಿಕೊಂಡು ಸ್ನೇಹ ಬೆಳೆಸಿ ಆ ಬಾಲಕನನ್ನೇ ವಿವಾಹ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದಾಳೆ.
ಇದೀಗ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
35ವರ್ಷದ ಮಹಿಳೆಗೆ 13 ವರ್ಷದ ಪುತ್ರಿ ಸೇರಿ ಮೂವರು ಮಕ್ಕಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆ ಬಾಲಕ ಮೂರು ದಿನ ನಾಪತ್ತೆಯಾಗಿದ್ದ. ನಂತರ ಮನೆಗೆ ಬಂದ ಆತ ಮೊಬೈಲ್ ಕಳೆದುಹೋಗಿದ್ದರಿಂದ ಹೆದರಿ ಸ್ನೇಹಿತರ ಜತೆ ಬೇರೆ ಊರಿನಲ್ಲಿ ಇದ್ದೆ ಎಂದು ಹೇಳಿಕೊಂಡಿದ್ದ.
ಅಷ್ಟರಲ್ಲಿ ಮಹಿಳೆಯು ಗ್ರಾಮಕ್ಕೆ ಬಂದು ಮನೆಯವರ ಬಳಿ ವಿಷಯ ಪ್ರಸ್ತಾಪಿಸಿ ಬಾಲಕನನ್ನು ತನಗೆ ವಿವಾಹ ಮಾಡಿಕೊಡುವಂತೆ ಮನವಿ ಮಾಡಿದ್ದಾಳೆ.
ಬಾಲಕನ ಮನೆಯವರು, ಊರಿನವರು ಎಷ್ಟೇ ಹೇಳಿದರೂ ಆ ಮಹಿಳೆ ಪಟ್ಟು ಬಿಟ್ಟಿಲ್ಲ.
ಕಡೆಗೆ ಬಾಲಕನನ್ನು ಮಹಿಳೆಯಿಂದ ರಕ್ಷಿಸಿ ತಮಗೊಪ್ಪಿಸುವಂತೆ ಪಾಲಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಬಾಲಕ ಹಾಗೂ ಮಹಿಳೆ ಮೂರು ದಿನ ಬೇರೆಲ್ಲೋ ಹೋಗಿ ಒಟ್ಟಿಗೆ ಅನ್ಯೋನ್ಯ ವಾಗಿ ಇದ್ದು ಬಂದಿದ್ದಾರೆ ಎಂದು ತಿಳಿದು ಬಂದಿದೆ. ಇಷ್ಟೆಲ್ಲಾ ಆದರೂ ಇನ್ನೂ ಪ್ರಕರಣ ದಾಖಲಾಗಿಲ್ಲ. ಇದು ಹಲವು ಅನುಮಾನಗಳಿಗೆ ಎಡೆಮಾಡಿದೆ.