ಮೈಸೂರು: ಅಪ್ರಾಪ್ತಳ ಮೇಲೆ ಪಾಪಿ ಚಿಕ್ಕಪ್ಪ ಅತ್ಯಾಚಾರ ನಡೆಸಿ ಬಳಿಕ ಪೆÇಲೀಸರಿಗೆ ಹೆದರಿ ವಿಷಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಾರೋಪುರ ಗ್ರಾಮದಲ್ಲಿ ನಡೆದಿದೆ.
ಹಾರೋಪುರದಲ್ಲಿ ಪುಟ್ಟ ಅಂಗಡಿ ನಡೆಸುತ್ತಿರುವ ಪ್ರದೀ( 26 ) ಅತ್ಯಾಚಾರ ಎಸಗಿದ ಪಾಪಿ
ಈತ ಪತ್ನಿಯನ್ನ ಹೆರಿಗೆಗೆ ಕಳಿಸಿ ಅತ್ತಿಗೆಯ ಅಪ್ರಾಪ್ತ ಮಗಳನ್ನು ಅತ್ಯಾಚಾರ ಮಾಡಿ ನಂತರ ಹೆದರಿ ಆತ್ಮಹತ್ಯೆಗೆ ಯತ್ನಿಸಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪತ್ನಿಯ ಅಕ್ಕನ ಮಗಳು 14 ವರ್ಷದ ಅಪ್ರಾಪ್ತ ಮಗಳ ಜೊತೆ ತಬ್ಬಿಕೊಂಡ ಫೆÇೀಟೋ ಒಂದನ್ನು ತೋರಿಸಿ ಆಕೆಯನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಮದು ತಿಳಿದು ಬಂದಿದೆ.
ಬಾಲಕಿ ಗರ್ಭಿಣಿಯಾಗಿದ್ದು ಪ್ರದೀ ನಡೆಸಿದ ಕೃತ್ಯವನ್ನು ಮುಚ್ಚಿಹಾಕುವ ಪ್ರಯತ್ನ ಕೂಡ ನಡೆದಿದೆ ಎನ್ನಲಾಗಿದೆ.
ಖಾಸಗಿ ಲ್ಯಾಬ್ ಒಂದರಲ್ಲಿ ಅಬಾರ್ಷನ್ ಮಾಡಿಸುವ ಯತ್ನ ನಡೆದಿದ್ದು, ಲ್ಯಾಬ್ ಸಿಬ್ಬಂದಿ ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಿಳಿಗೆರೆ ಪೆÇಲೀಸ್ ಠಾಣೆಯಲ್ಲಿ ಪೆÇೀಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಪ್ರದೀ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.