ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಜೋಡಿರಸ್ತೆ – ಶಾಲಾ ವಾಹನಗಳು!

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಚಾಮರಾಜನಗರ ಜೋಡಿರಸ್ತೆಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳಿಗೆ ಎಡಯಾಗುತ್ತಿದ್ದರೂ ಸೂಕ್ತ ಕ್ರಮ ವಹಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಚಾಮರಾಜನಗರ ಜೋಡಿರಸ್ತೆಯಲ್ಲಿ ಪಚ್ಚಪ್ಪ ವೃತ್ತದಿಂದ ರಾಮಸಮುದ್ರ ಜೋಡಿರಸ್ತೆಯಲ್ಲಿ ಅವೈಜ್ಞಾನಿಕ ಡಿವೈಡರ್ ಪರಿಣಾಮ ಎಲ್ಲಾದರೂ ಒಂದು ಕಡೆ ಅಪಘಾತ ನಡೆಯುತ್ತಲೆ ಇದೆ.

ಇದು ಒಂದು ಕಡೆಯಾದರೆ ವಾಹನ ಸವಾರರ ವೇಗ ಹಾಗೂ ನಿರ್ಲ್ಯಕ್ಷ ಕೂಡ ಅಪಘಾತಕ್ಕೆ ಕಾರಣವಾಗಿದೆ.

ಚಾಮರಾಜನಗರ ಜಿಲ್ಲಾಡಳಿತ ಭವನ ಹಾಗೂ ಜೆಎಸ್ಎಸ್ ಕಾಲೇಜು ಸಮೀಪ ರಬ್ಬರ್ ಹಂಪ್ ಹಾಕಿ ವೇಗ ನಿಯಂತ್ರಣ ತಂದರೂ ಉಳಿದ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ನಿರ್ಲ್ಯಕ್ಷ ವಹಿಸಿದೆ.

ವಾಹನ ಸವಾರರು ಬೆಳಗಿ‌ನ ಸಮಯದಲ್ಲಿ ಶಿರಸ್ತ್ರಾಣ ಧರಿಸದೆ, ಆಟೋ,ಕ್ಯಾಬ್ ಗಳಲ್ಲಿನ ಚಾಲಕರು ಸಮವಸ್ತ್ರ ಧರಿಸದೆ ವೇಗವಾಗಿ ಚಾಲನೆ ಮಾಡುವುದು ಒಂದೆಡೆಯಾದರೆ ಶಾಲಾ ಕಾಲೇಜಿನ ಸಮೀಪವೆ ವಿರುದ್ದ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುತ್ತಿರುವುದು ಅಪಘಾತಕ್ಕೆ ಎಡೆ ಮಾಡುತ್ತಿದೆ.

ಜೋಡಿರಸ್ತೆ, ಖಾಸಗಿ ಕಾಲೇಜಿನ ಮುಂಭಾಗ ಅತಿ ಹೆಚ್ಚು ಪೋಷಕರ ವಾಹನಗಳು  ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುವುದರಿಂದ ಉಳಿದ ವಾಹನಗಳ ಸಂಚಾರಕ್ಕೆ ಅಡೆತಡೆಯಾಗುತ್ತಿದೆ.

ಕಾಲೇಜು ಮುಂಬಾಗದಲ್ಲಿ ಜನದಟ್ಟಣೆ ಇರುವುದರಿಂದ ಪೊಲೀಸ್ ಸಿಬ್ಬಂದಿ ನಿಯೋಜಿಸಿದ್ದರೂ ನಿರುಪಯೋಗವಾದಂತಿದೆ.

ಇಲ್ಲಿ ನಿಯೋಜನೆಗೊಂಡ ಪೇದೆ ವಿರುದ್ದ ದಿಕ್ಕಿನಲ್ಲಿ ಬರುವ ವಾಹನವನ್ನಾಗಲಿ ಅಪ್ರಾಪ್ತ ಮಕ್ಕಳು ವಾಹನ ಚಾಲನೆ ಮಾಡುವುದನ್ನು ತಡೆಯುವ ಕೆಲಸವನ್ನು ಮಾಡಲಾಗುತ್ತಿಲ್ಲ.

ಇಂತಹವರನ್ನ ತಡೆದಾಗ ಸವಾರರು ಪೊಲೀಸರ ಮೇಲೆ ಗಲಾಟೆ ಮಾಡುವ,ಮಾಡಿರುವ ಉದಾಹರಣೆಗಳು ಕೂಡಾ ಇದೆ.

ಕಾಲೇಜಿಗೆ ಎರಡು ದ್ವಾರಗಳಿದ್ದು ಮುಖ್ಯದ್ವಾರ ಮುಚ್ಚಿ  ಆಸ್ಪತ್ರೆ ಎದುರುಗಡೆ ಇರೊ ಬಾಗಿಲು ತೆರೆಸಿದರೆ ಮಕ್ಕಳು ಸಿಬ್ಬಂದಿಗಳು ಓಡಾಡಿದರೆ ಪಾರ್ಕಿಂಗ್ ಸಮಸ್ಯೆ, ವಾಹನ ದಟ್ಟಣೆ ನಿಯಂತ್ರಿಸಬಹುದು ಎಂದು ಹಲವು ಪೋಷಕರು ಅಬಿಪ್ರಾಯ ಪಟ್ಟಿದ್ದಾರೆ.

ಕಾಲೇಜಿನ ಆಡಳಿತ ಮಂಡಳಿ ಜೊತೆ ಪೊಲೀಸ್ ಇಲಾಖೆ ಮಾತುಕತೆ ನಡೆಸಿ ಜನದಟ್ಟನೆ ತಗ್ಗಿಸಬಹುದು, ಜೊತೆಗೆ ಇಲಾಖಾ ಆ್ಯಪ್ ಬಳಸಿ ಅಪ್ರಾಪ್ತ ಮಕ್ಕಳಿಂದ ವಾಹನ ಚಾಲನೆ ಪೊಟೊ ಅಪ್ಡೇಟ್ ಮಾಡಿ ಪ್ರಕರಣ ದಾಖಲಿಸಿದರೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬಹುದು.

ಇಲ್ಲವಾದರೆ ಮುಂದಾಗುವ ಅನಾಹುತಗಳಿಗೆ ಇಲಾಖೆಯಾಗಲಿ, ಆಡಳಿತ ಸಂಸ್ಥೆಯಾಗಲಿ ನೇರಹೊಣೆಯಾಗಬೇಕಾಗುತ್ತದೆ.