ಪರವಾನಿಗೆ ಪರಿಶೀಲಿಸುತ್ತಿದ್ದ ಅಧಿಕಾರಿ ಮೇಲೆ ಹಲ್ಲೆ

ಮೈಸೂರು: ಪರವಾನಗಿ ಪರಿಶೀಲಿಸುತ್ತಿದ್ದ ಅಧಿಕಾರಿ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಕೆ.ಟಿ.ಸ್ಟ್ರೀಟ್ ನಲ್ಲಿ ಅಂಗಡಿ ಉದ್ಯಮ ಪರವಾನಿಗೆಯನ್ನು ಪರಿಶೀಲಿಸುತ್ತಿದ್ದ ಪಾಲಿಕೆಯ ಆರೋಗ್ಯ ನಿರೀಕ್ಷಕ ಜಿ.ವಿ.ಯೋಗೇಶ್ ರವರ ಮೇಲೆ ಅಂಗಡಿಯೊಂದರ ಯವಕ ಖಾಸಿಪ್ ಎಂಬಾತ ಹಲ್ಲೆ ಮಾಡಿದ್ದಾನೆ.
ಈ ಬಗ್ಗೆ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಜಯಂತ್ ಅವರು ಲಷ್ಕರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.