ನವದೆಹಲಿ: ವಿಶ್ವದ ಅತಿ ಉದ್ದದ ಅಟಲ್ ಸುರಂಗ ಮಾರ್ಗವನ್ನು ಲೋಕಾರ್ಪಣೆಗೊಳಿಸಲಾಗಿದೆ.
ವಿಶ್ವದ ಅತಿ ಉದ್ದದ ಸುರಂಗ ಮಾರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಲೋಕಾರ್ಪಣೆ ಮಾಡಿದರು.
ಮನಾಲಿ-ಲೇಹ್ ನಡುವೆ 3300 ಕೋಟಿ ರೂ. ವೆಚ್ಚದಲ್ಲಿ ಸತತ 28 ವರ್ಷಗಳ ಕಾಲ ಶ್ರಮ ವಹಿಸಿ ನಿರ್ಮಿಸಲಾಗಿಸಿರುವ 9.02ಕಿ.ಮೀ. ಉದ್ದದ ಈ ಸುರಂಗ ಮಾರ್ಗಕ್ಕೆ ಅಟಲ್ ಸುರಂಗ ಮಾರ್ಗ ಎಂದು ಹೆಸರಿಡಲಾಗಿದೆ.
ಈ ಸುರಂಗ ಮಾರ್ಗ ನಿರ್ಮಾಣದಿಂದ ಮನಾಲಿ ಮತ್ತು ಲೇಹ್ ನಡುವಿನ ಅಂತರವನ್ನು 46ಕಿ.ಮೀ.ನಷ್ಟು ತಗ್ಗಿಸುವುದರ ಜತೆಗೆ 5 ಗಂಟೆಗಳ ಅವಧಿ ಉಳಿತಾಯವಾಗಲಿದೆ.
ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿ ಅವರ ಕನಸಿನ ಕೂಸಾಗಿದ್ದ ಈ ಸುರಂಗ ಮಾರ್ಗಕ್ಕೆ 2002ರಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.
ಯಾವುದೇ ಹವಾಮಾನ ವೈಪರೀತ್ಯದ ಸಂದರ್ಭದಲ್ಲೂ ಸಾರ್ವಜನಿಕರು ಇಲ್ಲಿ ಪ್ರಯಾಣಿಸಬಹುದಾಗಿದೆ.