ಆತಂಕಕಾರಿ ನಿಯಮ ಜಾರಿ ಇಲ್ಲ -ಸುಧಾಕರ್

ಬೆಂಗಳೂರು: ಜನವರಿ ಅಂತ್ಯದವರೆಗೂ ಕೊರೊನ ಮಾರ್ಗಸೂಚಿಗಳು ಮುಂದುವರೆಯಲಿದೆ,ಆತಂಕಕಾರಿ ನಿಯಮ ಜರಿ ಮಾಡುವುದಿಲ್ಲ,ಜನತೆ ಸಹಕರಿಸಬೇಕು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಕೋವಿಡ್ ಮಾರ್ಗ ಸೂಚಿಗಳನ್ನು ಯಾರು ನಿರ್ಲಕ್ಷ್ಯ ಮಾಡಬೇಡಿ, ಮಾಸ್ಕ್ ಕಡ್ಡಾಯವಾಗಿ ಧರಿಸಿ, ಅರ್ಹರಿರುವವರೆಲ್ಲಾ ಬೂಸ್ಟರ್ ಡೋಸ್ ತಗೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಎರಡನೇ ಡೋಸ್ ಯಾರು ತಗೆದುಕೊಂಡಿಲ್ಲ ಅವರೆಲ್ಲ ತಪ್ಪದೆ ಡೋಸ್ ತಗೆದುಕೊಳ್ಳಿ,

ಲಾಕ್ ಡೌನ್ ಮಾಡುವುದರಿಂದ ಎಲ್ಲವೂ ಸರಿಯಾಗಿಬಿಡುವುದಿಲ್ಲ ಎಂದು ಹೇಳಿದರು.

ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಒಂದುವರೆ ತಿಂಗಳ ಕಾಲ ಸಭೆ ಸಮಾರಂಭಗಳನ್ನು ಮುಂದೂಡಿ ಎಂದು ಸಚಿವರು ಕೋರಿದರು.

ರಾಜ್ಯದಲ್ಲಿ ಸೋಂಕು ದಿನೇ ದಿನೇ ಹೆಚ್ಚಳ ಆಗುತ್ತಿದೆ. ಆದರೆ ಶೇ.5 ರಿಂದ 6ರಷ್ಟು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿರುವುದು ಸಮಾಧಾನದ ಸಂಗತಿ ಎಂದರು.

ನರ್ಸ್ ಗಳು ಕೂಡಾ ಸೋಂಕಿಗೆ ತುತ್ತಾಗುತ್ತಿದ್ದಾರೆ ಇದು ಆಂತಕದ ವಿಷಯ

ಹೀಗಾಗಿ ಮತ್ತಷ್ಟು ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ ಎಂದು ಸುಧಾಕರ್ ತಿಳಿಸಿದರು.

ವೀಕೆಂಡ್ ಕರ್ಫ್ಯೂ ಹಾಕಿದ್ದರೂ ಸೋಂಕು ಕಡಿಮೆ ಆಗುತ್ತಿಲ್ಲವಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು,

ಕಳೆದ ವಾರದಿಂದ ವೀಕೆಂಡ್ ಲಾಕ್ ಮಾಡಿದ್ದೇವೆ.7 ದಿನಕ್ಕೇ ಸೋಂಕು ಕಡಿಮೆ ಆಗಿಬಿಡುವುದಿಲ್ಲ ಎಂದರು.

ಮೊದಲ ಎರಡು ಅಲೆಯಲ್ಲಿ 14 ದಿನಗಳ ಚೈನ್ ಇತ್ತು.ಆದರೆ ಈ ಅಲೆಯಲ್ಲಿ ಸ್ವಲ್ಪ ಕಡಿಮೆ ಇದೆ,ಈ ಸೋಂಕು 5-6 ಪಟ್ಟು ವೇಗವಾಗಿ ಹರಡುತ್ತಿದೆ,ಹಾಗಾಗಿ ಇನ್ನೂ ಸ್ವಲ್ಪ ‌ದಿನ ಕಳೆದರೆ ವೀಕೆಂಡ್ ಕರ್ಫ್ಯೂವಿನ ಫಲಿತಾಂಶ ಸಿಗಬಹುದು ಎಂದು ತಿಳಿಸಿದರು.

ಆತಂಕಕಾರಿ ನಿಯಮ ಜಾರಿ ಮಾಡುವುದಿಲ್ಲ,ಲಾಕ್ ಡೌನ್ ಮೂಲಕ ಸೋಂಕು ನಿಯಂತ್ರಣ ಆಗಲ್ಲ

ಎರಡು ಬಾರಿ ಲಾಕ್ ಡೌನ್ ‌ಮಾಡಿ ಜನರಿಗೆ ಸಮಸ್ಯೆ ಆಗಿದೆ. ಪ್ರಧಾನಿ ಮೋದಿ  ಕೂಡಾ ಆರ್ಥಿಕ ನಷ್ಟ ಆಗದಂತೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ. ಎಂದು ಹೇಳಿದರು.

ಎಲ್ಲರೂ ಲಸಿಕೆ ತೆಗೆದುಕೊಳ್ಳಬೇಕು, ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು,ಬಹಿರಂಗ ಸಮಾವೇಶ, ಗುಂಪು ಗೂಡುವಂತಹ ಕೆಲಸ ಮಾಡಬೇಡಿ, ಒಂದೂವರೆ ತಿಂಗಳು ಎಚ್ಚರಿಕೆಯಿಂದ ಇರಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ರಾಜ್ಯದಲ್ಲಿ ಕೊರೊನಾ ಇನ್ನು ಪೀಕ್ ಗೆ ಹೋಗಿಲ್ಲ, ಫೆಬ್ರವರಿ ಮೊದಲ ವಾರ ಪೀಕ್ ಗೆ ಹೋಗುತ್ತೆ. ನಂತರ 3-4 ನೇ ವಾರದಿಂದ ಕಡಿಮೆ ಆಗುತ್ತದೆ ಎಂದು ತಜ್ಞರು ಹೇಳಿದ್ದಾರೆಂದು ಸಾಧಾಕರ್ ಮಾಹಿತಿ ನೀಡಿದರು.