ಬೆಂಗಳೂರಿನಲ್ಲಿ ಕೊರೊನಾ ಸ್ಪೋಟ

ಬೆಂಗಳೂರು:ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಮಹಾಸ್ಪೋಟವಾಗಿದೆ.

ಒಂದೇ ದಿನ 3605 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮಂಗಳವಾರ ನಗರದಲ್ಲಿ 2053 ಕೊರೊನಾ ಪ್ರಕರಣಗಳು ಪತ್ತೆಯಾಗಿತ್ತು.ಬುಧವಾರ ಒಂದೇ ದಿನ 1552 ಹೆಚ್ಚಿನ ಪ್ರಕರಣಗಳು ದಾಖಲಾಗಿರುವುದು ಆತಂಕಕಾರಿಯಾಗಿದೆ.

201 ದಿನಗಳ ಬಳಿಕ ನಗರದಲ್ಲಿ  ಒಂದೇ ದಿನ 2053 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿತ್ತು. ಇದೀಗ ಮತ್ತೆ 1552ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿರುವುದರಿಂದ ಜನರು ಎಚ್ಚರಿಕೆವಹಿಸುವ ಅಗತ್ಯವಿದೆ.

ದಿನೇ ದಿನೇ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ ನಗರದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 11423ಕ್ಕೆ ಏರಿಕೆಯಾಗಿದೆ.

ಇದರೊಂದಿಗೆ ನಗರದಲ್ಲಿ ಕೊರೊನಾ ಸೋಂಕಿಗೆ ಗುರಿಯಾದವರ ಒಟ್ಟು ಸಂಖ್ಯೆ 12,78,445ಕ್ಕೆ ಏರಿಕೆಯಾಗಿದ್ದರೆ, ಇದುವರೆಗೂ ಸೋಂಕಿಗೆ 16412 ಮಂದಿ ಬಲಿಯಾಗಿರುವುದು ಉಲ್ಲೇಖಾರ್ಹ.

ಕೊರೊನಾ ಜತೆಗೆ ಓಮಿಕ್ರಾನ್ ಸೋಂಕಿತರ ಸಂಖ್ಯೆ ಕೂಡಾ ಹೆಚ್ಚಾಗುತ್ತಿರುವುದು ಪರಿಸ್ಥಿತಿಯ ಭೀಕರತೆಗೆ ತೋರಿಸುತ್ತಿದೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಓಮಿಕ್ರಾನ್ ಬ್ಲಾಸ್ಟ್ ಆಗಿದ್ದು, ಒಂದೇ ದಿನ 149 ಮಂದಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 226ಕ್ಕೆ ಏರಿಕೆಯಾಗಿದೆ.

ಓಮಿಕ್ರಾನ್ ಸೋಂಕು ತಗುಲಿರುವವರ ಟ್ರಾವಲ್ ಹಿಸ್ಟರಿ ಭಯಾನಕವಾಗಿದ್ದು, ಸೋಂಕಿತರಿಂದ ಮತ್ತಷ್ಟು ಮಂದಿಗೆ ಓಮಿಕ್ರಾನ್ ಹರಡುವ ಭೀತಿ ಎದುರಾಗಿದೆ.