ಭಾರತೀಯ ಸೇನೆಯಿಂದ ಉಗ್ರನೊಬ್ಬನ ಹತ್ಯೆ

ಶ್ರೀನಗರ: ಭಾರತೀಯ ಭದ್ರತಾ ಪಡೆ ಓರ್ವ ಉಗ್ರನನ್ನು ಹೊಡೆದುರುಳಿಸಿದ್ದು, ಮತ್ತೊಬ್ಬ ಉಗ್ರ ಶರಣಾಗಿದ್ದಾನೆ.

ಲಷ್ಕರ್ ಇ ತೊಯ್ಬಾ ಸಂಘಟನೆ ಕಮಾಂಡರ್ ರಿಯಾಜ್ ಸತ್ರ್ ಗುಂಡ್ ಎಂಬ ಉಗ್ರ ನಾಯಕ ತನಗೆ ಒಂದು ಅಡಗುದಾಣ ನಿರ್ಮಿಸಿಕೊಡುವಂತೆ ಹೇಳಿದ್ದ. ಆತನ ಆದೇಶದಂತೆ ಸಂಘಟನೆಯ ಇಬ್ಬರು ಉಗ್ರರು ನೌಹಟ್ಟಾದ ರಜೌರಿ ಕದಲ್ ನಲ್ಲಿ ಅಡಗುತಾಣ ನಿರ್ಮಾಣಕ್ಕೆ ಮುಂದಾಗಿದ್ದರು.

ಈ ಬಗ್ಗೆ ತಿಳಿದ ಭಾರತೀಯ ಸೇನೆ ಉಗ್ರರ ಅಡಗುದಾಣದ ಬಗ್ಗೆ ಮಾಹಿತಿ ಕಲೆಹಾಕಿ ಸ್ಥಳಕ್ಕೆ ತೆರಳಿದಾಗ ಈ ವೇಳೆ ಅಲ್ಲಿದ್ದ ಇಬ್ಬರು ಉಗ್ರರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದರು.

ಆಗ ಪ್ರತಿದಾಳಿ ನಡೆಸಿದ ಸೇನೆ ಇಬ್ಬರು ಉಗ್ರರ ಪೈಕಿ ಓರ್ವ ಉಗ್ರನನ್ನು ಹೊಡೆದುರುಳಿಸಿತು. ಮತ್ತೊಬ್ಬ ಉಗ್ರ ಸೈನಿಕರಿಗೆ ಶರಣಾಗಿದ್ದಾನೆ ಎಂದು ಕಾಶ್ಮೀರ ಪೆÇಲೀಸರು ತಿಳಿಸಿದ್ದಾರೆ.